alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ಕೃತಕ ಮಂಡಿ ಚಿಪ್ಪಿನಲ್ಲಿತ್ತು 26 ಚಿನ್ನದ ಬಿಸ್ಕತ್ತು…!

ಕೋಲ್ಕತ್ತ: ಭಾರತ-ಬಾಂಗ್ಲಾದೇಶ ಗಡಿ ಭಾಗದಲ್ಲಿ ಸುಮಾರು 95 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್ ಅನ್ನು ಗಡಿ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಗಡಿ ಪ್ರದೇಶದಲ್ಲಿ ಈ ಚಿನ್ನ ಕಳ್ಳಸಾಗಣೆದಾರನನ್ನು ಬಂಧಿಸಿದ್ದಾಗಿ ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಭಾಗದ ಹೊರಪ್ರದೇಶವಾದ ಕೃಷ್ಣಾನಗರದ ಮುಸ್ತಫಾಪುರದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ 95.16 ಲಕ್ಷ ಮೌಲ್ಯದ 26 ಚಿನ್ನದ ಬಿಸ್ಕತ್ತುಗಳು ವಶಕ್ಕೆ ಪಡೆಯಲಾಗಿದೆ. 24 ಪರಗಣ ಜಿಲ್ಲೆಯ ಲೋಕ್ಮನ್ ಪಾಲ್ (47) ಬಂಧಿತ ವ್ಯಕ್ತಿ.

ಲೋಕ್ಮನ್ ಈ 26 ಚಿನ್ನಗಳನ್ನು ತನ್ನ ಬಲಗಾಲಿನ ಕೃತಕ ಮಂಡಿಚಿಪ್ಪಿನಲ್ಲಿ ಇಟ್ಟುಕೊಂಡಿದ್ದ. ಸದ್ಯ ಈತನನ್ನು ಬಾಗ್ದಾ ಪೊಲೀಸ್ ಠಾಣೆ ವಶಕ್ಕೆ ಒಪ್ಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 2018ರ ಶುರುವಲ್ಲಿ ಸುಮಾರು 8 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆದಿದ್ದ ಬಿಎಸ್ಎಫ್ ಯೋಧರು, 10 ಕಳ್ಳಸಾಗಣೆದಾರರನ್ನು ಬಂಧಿಸಿದ್ದನ್ನು ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...