alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆ ಬರೆಯಲು ಹೊರಟಿದ್ದ ಮಗನಿಗೆ ಆಶೀರ್ವಾದ ಕೋರಿ ಊರಿಗೇ ಊಟ ಹಾಕಿಸಿದ ತಂದೆ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬಡ ರೈತನೊಬ್ಬ ಮಗನಿಗಾಗಿ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡ್ತಿದ್ದಾನೆ. ಅಜಬ್ ಅಲಿ ಮಗ ಶಮಿಮ್ ಶೇಖ್ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾನೆ. ಮಗನಿಗೆ ಆರ್ಶೀವಾದ ಮಾಡುವಂತೆ 700 ಗ್ರಾಮಸ್ಥರನ್ನು ಊಟಕ್ಕೆ ಆಹ್ವಾನಿಸಿದ್ದಾನೆ.

ಅಜಬ್ ಅಲಿ ಕುಟುಂಬದಲ್ಲಿ 10ನೇ ತರಗತಿ ಪರೀಕ್ಷೆ ಬರೆಯುತ್ತಿರುವ ಮೊದಲ ವ್ಯಕ್ತಿ ಶಮಿಮ್. ಮಗನಿಗೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಅಜಿಬ್ ಈ ಕೆಲಸಕ್ಕೆ ಕೈ ಹಾಕಿದ್ದಾನೆ. ಚಾರ್ಬಬೂಪುರ್ ಗ್ರಾಮದಲ್ಲಿ ಪೂರ್ವಜರ ಸಣ್ಣ ಭೂಮಿಯೊಂದು ಅಲಿ ಹೆಸರಿನಲ್ಲಿದೆ. ಇದ್ರಲ್ಲಿಯೇ ಕುಟುಂಬದ ಹೊಟ್ಟೆ ಹೊರೆಯುತ್ತಿರುವ ಅಲಿ ಕಳೆದ ಒಂದು ವರ್ಷದಿಂದ ಔತಣ ಕೂಟಕ್ಕಾಗಿ ಉಳಿತಾಯ ಮಾಡಿದ್ದನಂತೆ.

ಗ್ರಾಮಸ್ಥರನ್ನು ಉಪಚರಿಸಿ ಅವ್ರ ಆಶೀರ್ವಾದ ಪಡೆದ್ರೆ ಮಗ ಒಳ್ಳೆ ಅಂಕ ಪಡೆಯುತ್ತಾನೆಂದು ಅಲಿಗೆ ಕೆಲವರು ಹೇಳಿದ್ದರಂತೆ. ಅವ್ರ ಹೇಳಿಕೆ ನಂತ್ರ ಅಲಿ ಉಳಿತಾಯ ಶುರು ಮಾಡಿದ್ದನಂತೆ. ಔತಣಕೂಟಕ್ಕೆ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿ ಅಲಿ ಎಲ್ಲರನ್ನು ಕರೆದಿದ್ದನಂತೆ.

ಚಾರ್ಲಬಂಗೊಲಾ ಹೈ ಮದ್ರಾಸ ನಲ್ಲಿ ಅಲಿ ಮಗ 10ನೇ ತರಗತಿ ಓದುತ್ತಿದ್ದಾನೆ. ಅಲಿ ಅದ್ಧೂರಿ ಊಟ ನೀಡಿಲ್ಲ. ಐದು ದಿನಗಳ ಹಿಂದೆ ಚಿಕನ್ ಕರಿ, ಫ್ರೈಡ್ ತರಕಾರಿ, ಅನ್ನ, ಮೊಸರು ಸೇರಿದಂತೆ ಕೆಲ ರುಚಿರುಚಿ ಆಹಾರ ಬಡಿಸಿದ್ದಾರೆ. ಇದಕ್ಕೆ ಬದಲಾಗಿ ಗ್ರಾಮಸ್ಥರು ಪೆನ್ನು, ಪೆನ್ಸಿಲ್, ಪುಸ್ತಕ, ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದಾರಂತೆ.

ಉಡುಗೊರೆ ವಿಶೇಷವಲ್ಲ. ಅವರ ಆಶೀರ್ವಾದ ಬಹಳ ಮುಖ್ಯ. ನಾನು ವೈದ್ಯನಾಗಬಯಸಿದ್ದೆ. ಆದ್ರೆ 3ನೇ ಕ್ಲಾಸಿಗೆ ಶಾಲೆ ಬಿಡಬೇಕಾಯ್ತು. ನನ್ನ ಮಗ ಶಿಕ್ಷಣ ಮುಗಿಸಲಿ ಎನ್ನುವ ಆಸೆ ನಮ್ಮದು ಎನ್ನುತ್ತಾನೆ ಅಲಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...