alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ನೆನಪಿಗಾಗಿ ನಾಯಿ ಆಸ್ಪತ್ರೆ ತೆರೆಯಲಿದ್ದಾರೆ ಸಚಿವರು

ದಕ್ಷಿಣ ಬಂಗಾಳದ ಶಿಕ್ಷಣ ಸಚಿವ ಪಾರ್ಥಾ ಚಟರ್ಜಿ ಕೊಲ್ಕತ್ತಾದಲ್ಲಿ ನಾಯಿ ಆಸ್ಪತ್ರೆ ತೆಗೆಯಲು ಮುಂದಾಗಿದ್ದಾರೆ. ಪತ್ನಿ ನೆನಪಿಗಾಗಿ ಅವರು ಈ ಆಸ್ಪತ್ರೆ ತೆರೆಯಲಿದ್ದಾರೆ. 2017ರಲ್ಲಿ ಅವರ ಪತ್ನಿ ನಿಧನರಾಗಿದ್ದರು. ಟ್ರಸ್ಟ್ ಮೂಲಕ ನಡೆಯುವ ಈ ಆಸ್ಪತ್ರೆಗೆ ಬಾಬ್ಲಿ ಚಟರ್ಜಿ ಮೆಮೋರಿಯಲ್ ಪೆಟ್ ಹಾಸ್ಪಿಟಲ್ ಎಂದು ಹೆಸರಿಡಲಿದ್ದಾರಂತೆ.

ವಿದೇಶದಲ್ಲಿರುವ ಮಗಳು ಕೊಲ್ಕತ್ತಾಗೆ ವಾಪಸ್ ಬಂದಿದ್ದು ತಾಯಿ ಸಾಕಿದ್ದ ನಾಯಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಪಾರ್ಥಾ ಚಟರ್ಜಿ ಪತ್ನಿ, ನಾಯಿ ಪ್ರೇಮಿಯಾಗಿದ್ದರಂತೆ. ನಾಯಿಯನ್ನು ಪ್ರೀತಿಯಿಂದ ನೋಡುತ್ತಿದ್ದ ಅವರು ಅದ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರಂತೆ. ಬಾಬ್ಲಿ ನಾಯಿ ಪ್ರೀತಿ ಸದಾ ನೆನಪಿರಲಿ ಎನ್ನುವ ಕಾರಣಕ್ಕೆ ಸಚಿವರು ಈ ಕೆಲಸಕ್ಕೆ ಮುಂದಾಗಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ತಡರಾತ್ರಿ ಅವರು ಮನೆಗೆ ಬಂದ್ರೆ ಬೆಡ್ ಮೇಲೆ ಜಾಗವಿರುವುದಿಲ್ಲವಂತೆ. ಸಾಕು ನಾಯಿಗಳು ಬೆಡ್ ನಲ್ಲಿ ಮಲಗಿರುತ್ತವಂತೆ. ಅನೇಕ ಬಾರಿ ಸಚಿವರು ನೆಲದ ಮೇಲೆ ರಾತ್ರಿ ಕಳೆದಿದ್ದಾರಂತೆ. ದಕ್ಷಿಣ ಕೊಲ್ಕತ್ತಾದ ರೈಲ್ವೆ ನಿಲ್ದಾಣದ ಬಳಿ ಟ್ರಸ್ಟ್ ಹೆಸರಿನಲ್ಲಿ 17 ಎಕರೆ ಜಮೀನಿದೆ. ಅಲ್ಲಿ ಆಸ್ಪತ್ರೆ ಶುರುಮಾಡುತ್ತೇನೆಂದು ಸಚಿವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...