alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಕ-ತಮ್ಮನ ಬಾಂಧವ್ಯಕ್ಕೆ ಸಾಕ್ಷಿ ಈ ವೈರಲ್ ಫೋಟೋ

ರಕ್ಷಾಬಂಧನದಂತೆ ಪಶ್ಚಿಮ ಬಂಗಾಳದಲ್ಲಿ ಭಾಯಿ ದೂಜ್ ಹಬ್ಬವನ್ನು ಆಚರಿಸಲಾಗುತ್ತದೆ. ಸಹೋದರ-ಸಹೋದರಿಯರ ನಡುವಣ ಬಾಂಧವ್ಯ ಬೆಸೆಯುವ ಹಬ್ಬ ಇದು. ತಮ್ಮನ ಹಣೆಗೆ ತಿಲಕವಿಟ್ಟು ಅಕ್ಕ ಆಶೀರ್ವಾದ ಮಾಡುವ ಸಂಪ್ರದಾಯವಿದೆ.

ಅದೇ ರೀತಿ ವಿಕಲಚೇತನ ಯುವತಿಯೊಬ್ಬಳು ತನ್ನ ತಮ್ಮನಿಗೆ ಆಶೀರ್ವಾದ ಮಾಡಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಆಕೆಗೆ ಕೈಗಳು ಸರಿಯಾಗಿಲ್ಲ. ಹಾಗಾಗಿ ವ್ಹೀಲ್ ಚೇರ್ ನಲ್ಲಿ ಕುಳಿತೇ ತನ್ನ ಕಾಲ್ಬೆರಳಿನಿಂದ ತಮ್ಮನ ಹಣೆಗೆ ತಿಲಕ ಇಟ್ಟಿದ್ದಾಳೆ.

ಆತನ ತಲೆ ಮೇಲೆ ಪಾದವನ್ನಿಟ್ಟು ಪ್ರೀತಿಯಿಂದ ಆಶೀರ್ವಾದ ಮಾಡಿದ್ದಾಳೆ. ಈ ಫೋಟೋಗಳನ್ನು ಸಾಮ್ರಾಟ್ ಬಸು ಎಂಬ ಯುವಕ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ. 14,000ಕ್ಕೂ ಹೆಚ್ಚು ಮಂದಿ ಇದನ್ನು ಶೇರ್ ಮಾಡಿದ್ದಾರೆ. ಅಕ್ಕ-ತಮ್ಮನ ಪ್ರೀತಿ ಇದೇ ರೀತಿ ಇರಲಿ ಅಂತಾ ಹಾರೈಸಿದ್ದಾರೆ.

শুভ ভাইফোঁটা ।

Posted by Samrat Basu on Saturday, October 21, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...