alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮಸ್ಥರ ಹೃದಯ ವೈಶಾಲ್ಯತೆಗೆ ಹ್ಯಾಟ್ಸಾಫ್

KULGAM

ಹಳ್ಳಿಗಳಲ್ಲಿ ಇರುವಷ್ಟು ಅನ್ಯೋನ್ಯತೆ ಸಾಮಾನ್ಯವಾಗಿ ಪಟ್ಟಣಗಳಲ್ಲಿ ಕಂಡುಬರುವುದಿಲ್ಲ. ಯಾವುದೇ, ಜಾತಿ ಜನಾಂಗದವರಿರಲಿ, ಹಳ್ಳಿಗಳಲ್ಲಿ ಒಂದೇ ಕುಟುಂಬದವರಂತೆ ಜೀವನ ನಡೆಸುತ್ತಾರೆ. ಯಾರಿಗಾದರೂ ಏನಾದರೂ ಆದರೆ ಸ್ಪಂದಿಸುತ್ತಾರೆ ಎಂಬುದಂತೂ ಗೊತ್ತಿರುವ ವಿಷಯವೇ.

ಜಮ್ಮು ಕಾಶ್ಮೀರದ ಕುಲ್ಲಂ ಜಿಲ್ಲೆಯ ಮಲ್ವನ್ ಗ್ರಾಮದಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದ್ದು, ಎಲ್ಲರೂ ಮುಸ್ಲಿಂ ಸಮುದಾಯದವರೇ ಆಗಿದ್ದಾರೆ. ಇಲ್ಲಿ ಹಿಂದಿನಿಂದಲೂ ಜಂಕಿನಾಥ್ ಎಂಬ ಕಾಶ್ಮೀರಿ ಪಂಡಿತ ವ್ಯಕ್ತಿ ವಾಸವಾಗಿದ್ದು, ಗ್ರಾಮದ ಜನರೊಂದಿಗೆ ಅನ್ಯೋನ್ಯವಾಗಿದ್ದರು. ಅವರಿಗೆ 84 ವರ್ಷ ವಯಸ್ಸಾದ ನಂತರ ವಯೋ ಸಹಜ ಕಾಯಿಲೆಯಿಂದ ಬಳಲಿ ಮೃತಪಟ್ಟಿದ್ದು, ಅವರ ಕುಟುಂಬದವರು ಯಾರೂ ಬಾರದ ಕಾರಣ, ಗ್ರಾಮದ ಮುಸ್ಲಿಂ ಸಮುದಾಯದವರೇ ಮುಂದೆ ನಿಂತು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಸರ್ಕಾರಿ ಉದ್ಯೋಗದಲ್ಲಿದ್ದ ಜಂಕಿನಾಥ್ ನಿವೃತ್ತಿಯ ಬಳಿಕ ಈ ಗ್ರಾಮದಲ್ಲಿ ನೆಲೆ ಕಂಡುಕೊಂಡಿದ್ದರು. ಗ್ರಾಮಸ್ಥರೊಂದಿಗೆ ಅನ್ಯೋನ್ಯವಾಗಿದ್ದ ಅವರಿಗೆ ಎಲ್ಲರೂ ಪ್ರೀತಿ ತೋರುತ್ತಿದ್ದರು. ಕಾಯಿಲೆ ಬಿದ್ದಾಗಲೂ ಆರೈಕೆ ಮಾಡುತ್ತಿದ್ದರು. ಅವರ ನಿಧನಕ್ಕೆ ಕಂಬನಿ ಮಿಡಿದ ಗ್ರಾಮಸ್ಥರು, ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ ಹೃದಯ ವೈಶಾಲ್ಯತೆ ಮೆರೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...