alex Certify
ಕನ್ನಡ ದುನಿಯಾ       Mobile App
       

Kannada Duniya

ಭಿಕ್ಷೆ ಬೇಡುವುದು ಕ್ರಿಮಿನಲ್ ಕೃತ್ಯವಲ್ಲವೆಂದ ದೆಹಲಿ ನ್ಯಾಯಾಲಯ

ಭಿಕ್ಷೆ ಬೇಡುವುದು ಅಪರಾಧ ಕೃತ್ಯವಲ್ಲವೆಂದು ಹೇಳಿರುವ ದೆಹಲಿ ಹೈಕೋರ್ಟ್, ಸರ್ಕಾರಗಳು ಇವರಿಗೆ ಆಹಾರ, ವಸತಿ ಒದಗಿಸಿದರೆ ಅವರೇಕೆ ಇಂತಹ ಕೆಲಸಕ್ಕಿಳಿಯುತ್ತಾರೆಂದು ಪ್ರಶ್ನಿಸಿದೆ.

ಹರ್ಶ್ ಮಂದಾರ್ ಹಾಗೂ ಕರ್ಣಿಕಾ ಸಹಾನೆ ಎಂಬ ಸಾಮಾಜಿಕ ಕಾರ್ಯಕರ್ತರು, ಭಿಕ್ಷಾಟನೆಯನ್ನು ಅಪರಾಧ ಕೃತ್ಯವೆಂದು ಪರಿಗಣಿಸದಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗೀತಾ ಮಿತ್ತಲ್ ಹಾಗೂ ಸಿ. ಹರಿ ಶಂಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರರ ವಾದವನ್ನು ಎತ್ತಿ ಹಿಡಿದ ಹೈಕೋರ್ಟ್, ಸರ್ಕಾರ ಆಹಾರ, ವಸತಿ, ಉದ್ಯೋಗದಂತಹ ಮೂಲಭೂತ ಸೌಲಭ್ಯ ಒದಗಿಸಿದರೆ ಅವರುಗಳೇಕೆ ಭಿಕ್ಷೆ ಬೇಡಲು ಮುಂದಾಗುತ್ತಾರೆ ಎಂದಿದೆ.

ಬಾಂಬೆ ಪ್ರಿವೆನ್ಶನ್ ಆಫ್ ಬೆಗ್ಗಿಂಗ್ ಆಕ್ಟ್ 1959 ರ ಪ್ರಕಾರ ಭಿಕ್ಷೆ ಬೇಡುವುದು ಅಪರಾಧವಾಗಿದ್ದು, ಮೊದಲ ಬಾರಿ ಸಿಕ್ಕಿ ಬಿದ್ದರೆ ಮೂರು ವರ್ಷಗಳ ಜೈಲು ಪುನಃ ಇದು ಮರುಕಳಿಸಿದರೆ 10 ವರ್ಷಗಳ ಜೈಲು ಶಿಕ್ಷೆಯಾಗುತ್ತಿತ್ತು. ಭಿಕ್ಷುಕರ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರು, ಇದನ್ನು ರದ್ದುಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...