alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಟ್ರೋ ಅಧಿಕಾರಿಗಳಿಂದಾಗಿದೆ ಸಾರ್ಥಕ ಕಾರ್ಯ

0015,181 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೇರಳದ ಕೊಚ್ಚಿಯಲ್ಲಿನ ಮೆಟ್ರೋ ರೈಲು ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಶನಿವಾರದಂದು ಮೆಟ್ರೋ ರೈಲಿನ ಉದ್ಘಾಟನೆ ನೆರವೇರಿಸಲಿದ್ದಾರಲ್ಲದೇ ಪಲರಿವಾಟೂಂನಿಂದ ಪತಾಡಿಪಾಲಂವರೆಗೆ ಇದರಲ್ಲೇ ಪ್ರಯಾಣಿಸಲಿದ್ದಾರೆ.

002

ಇದರ ನಡುವೆ ಮೆಟ್ರೋ ರೈಲು ಉದ್ಘಾಟನೆಗೂ ಮುನ್ನ ಹಿರಿಯ ಅಧಿಕಾರಿಗಳು ಸಾರ್ಥಕ ಕಾರ್ಯ ಮಾಡಿದ್ದಾರೆ. ದೇಶದ ವಿವಿಧೆಡೆಗಳಿಂದ ಆಗಮಿಸಿ ಹಗಲಿರುಳು ಮೆಟ್ರೋ ಕಾಮಗಾರಿಗೆ ಶ್ರಮಿಸಿದ್ದ 800 ಕ್ಕೂ ಅಧಿಕ ವಲಸೆ ಕಾರ್ಮಿಕರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಈ ಔತಣಕೂಟದಲ್ಲಿ ಕೊಚ್ಚಿ ಮೆಟ್ರೋ ರೈಲ್ವೇ ನಿಗಮದ ಎಂಡಿ, ಹಿರಿಯ ಐಎಎಸ್ ಅಧಿಕಾರಿ ಎಲಿಸಾ ಜಾರ್ಜ್ ಕೂಡಾ ಪಾಲ್ಗೊಂಡು ವಲಸೆ ಕಾರ್ಮಿಕರ ಜೊತೆ ಔತಣ ಸವಿದಿದ್ದಾರೆ.005

ಅಷ್ಟೇ ಅಲ್ಲ, ವಲಸೆ ಕಾರ್ಮಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ. ಕೆಲವರು ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡಿದ್ದಾರೆ. ಮೆಟ್ರೋ ಮೆಸೇಜ್ ಬೋರ್ಡ್ ನಲ್ಲಿ ಕಾರ್ಮಿಕರು ತಮ್ಮ ಸಹಿಯನ್ನೂ ಹಾಕಿದ್ದಾರೆ. ತೃತೀಯ ಲಿಂಗಿಗಳಿಗೆ ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದ ನಿಗಮ, ಮೆಟ್ರೋ ಚಾಲನೆಗೆ ಮಹಿಳಾ ಚಾಲಕರನ್ನೂ ನೇಮಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...