alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹದ ಬಳಿಕ ಬದಲಾಗಿರುವ ಕೇರಳವನ್ನು ಒಮ್ಮೆ ನೋಡಿ….

ಶತಮಾನದಲ್ಲೇ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಕೇರಳ ಚೇತರಿಕೆಯ ಹಾದಿಯಲ್ಲಿ ಎರಡು ತಿಂಗಳುಗಳನ್ನು ಕಳೆದಿದೆ. ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಿಗೆ ಹಣ ಸಂಗ್ರಹವೇ ಪ್ರಮುಖ ಸವಾಲಾಗಿ ಉಳಿದುಕೊಂಡಿದೆ.

ನೈಋತ್ಯ ಮುಂಗಾರಿನ ವೇಳೆಯ ಮಳೆ ಹಾಗೂ ಪ್ರವಾಹಕ್ಕೆ ಕೇರಳದಾದ್ಯಂತ 493 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 25,000 ಕೋಟಿ ರೂ.ಗೂ ಹೆಚ್ಚು ನಷ್ಟದ ಅಂದಾಜು ಮಾಡಲಾಗಿದೆ. ಪ್ರವಾಹಪೀಡಿತ ಕೇರಳದ ಮರು ನಿರ್ಮಾಣದ ನಿಗಾಕ್ಕೆ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ. ಮುಖ್ಯ ಕಾರ್ಯದರ್ಶಿಯವರು ಪುನರ್ವಸತಿ ಕಾರ್ಯದ ನೇತೃತ್ವ ವಹಿಸಿದ್ದಾರೆ.

ಆಗಸ್ಟ್ ಮಧ್ಯ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಾಜ್ಯಾದ್ಯಂತ 35 ಅಣೆಕಟ್ಟುಗಳಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡಬೇಕಾಗಿ ಬಂದಿತ್ತು. ಇದು ಹೆಚ್ಚಿನ ಹಾನಿಗೆ ಕಾರಣವಾಗಿತ್ತು.

ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಕೇರಳದ ಚಿತ್ರಗಳು ಇಲ್ಲಿವೆ:

ಆಲುವಾದಲ್ಲಿ ಆ.12ರಂದು ಪ್ರವಾಹಪೀಡಿತ ಸ್ಥಳಗಳಿಂದ ಬೋಟ್ ಮೂಲಕ ಸುರಕ್ಷಿತ ಸ್ಥಳಗಳತ್ತ ಜನರನ್ನು ಸ್ಥಳಾಂತರಿಸಲಾಗಿತ್ತು. ಇದೀಗ ಆಲುವಾದ ಅದೇ ರಸ್ತೆಯಲ್ಲಿ ಶಾಲಾ ಬಸ್ ಸಂಚರಿಸುತ್ತಿದೆ.

ಪರವೂರ್‌ನಲ್ಲಿ ಮನೆಯೊಂದರಲ್ಲಿ ತುಂಬಿದ್ದ ಕೆಸರು ಮಣ್ಣನ್ನು ಅಂದು ಸ್ವಚ್ಚಗೊಳಿಸುತ್ತಿದ್ದ ಮಹಿಳೆ. ಇದೀಗ ಪರವೂರ್‌ನ ಅದೇ ಮನೆಯ ಹೊರಗೆ ಕುಳಿತು ವ್ಯಕ್ತಿಯೊಬ್ಬ ಪತ್ರಿಕೆ ಓದುತ್ತಿದ್ದಾರೆ.

ಇಡಮಲಯಾರ್ ಮತ್ತು ಚೆರುತೋನಿ ಅಣೆಕಟ್ಟುಗಳಿಂದ ನೀರು ಬಿಟ್ಟ ಬಳಿಕ ಪೆರಿಯಾರ್ ನದಿಯ ದಂಡೆಯಲ್ಲಿ ಪ್ರವಾಹದ ಮಧ್ಯೆ ಆ.10ರಂದು ಗಸ್ತು ತಿರುಗುತ್ತಿದ್ದ ರಕ್ಷಣಾ ಸಿಬ್ಬಂದಿ. ಇದೀಗ ಪೆರಿಯಾರ್ ನದಿ ದಂಡೆಯ ಮೇಲೆ ಹಸುಗಳು ಮೇಯುತ್ತಿರುವುದು. (ಚಿತ್ರ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್)

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...