alex Certify
ಕನ್ನಡ ದುನಿಯಾ       Mobile App
       

Kannada Duniya

ಬೂಟಿಕ್ ಗೆ ಬಂದ ಇಬ್ಬರು ಹುಡುಗಿಯರು ಮಾಡಿದ್ದೇನು ಗೊತ್ತಾ?

girl

ಜಲಂಧರ್ ನ ಮಾಡೆಲ್ ಟೌನ್ ನಲ್ಲಿರುವ ಒಂದು ಬೂಟಿಕ್ ಗೆ ಬಂದ ಹುಡುಗಿಯರಿಬ್ಬರು ತಲೆ ತಗ್ಗಿಸುವಂತ ಕೆಲಸ ಮಾಡಿದ್ದಾರೆ. ಹುಡುಗರ ಜೊತೆ ಕಾರ್ ನಲ್ಲಿ ಬಂದ ಹುಡುಗಿಯರು ಬೂಟಿಕ್ ನಲ್ಲಿದ್ದ ಬೆಲೆ ಬಾಳುವ ಸೂಟ್ ಕದ್ದೊಯ್ದಿದ್ದಾರೆ.

ಮಾಡೆಲ್ ಟೌನ್ ನಲ್ಲಿರುವ ಉಮೇಶ್ ನಾಯಕ್ ಎಂಬುವವರ ಬೂಟಿಕ್ ಗೆ ಐಶಾರಾಮಿ ಕಾರ್ ನಲ್ಲಿ ಇಬ್ಬರು ಹುಡುಗರ ಜೊತೆ ಹುಡುಗಿಯರು ಬಂದಿದ್ದಾರೆ. ಅಂಗಡಿ ಒಳಗೆ ಬಂದವರು ಹೊಸ ವಿನ್ಯಾಸದ ಸೂಟ್ ತೋರಿಸುವಂತೆ ಹೇಳಿದ್ದಾರೆ. ಅನೇಕ ಸೂಟ್ ಗಳನ್ನು ನೋಡಿದ ಅವರು ಯಾವುದನ್ನೂ ಖರೀದಿಸದೆ ಕಾರ್ ನಲ್ಲಿ ವಾಪಸ್ ಆಗಿದ್ದಾರೆ.

ಅವರು ಹೋಗ್ತಾ ಇದ್ದಂತೆ ಅಂಗಡಿಯಲ್ಲಿದ್ದ ಮಹಿಳೆಗೆ ಬೆಲೆ ಬಾಳುವ ಸೂಟ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಆದ್ರೆ ಬಂದ ಹುಡುಗಿಯರು ಆಗಲೇ ಪರಾರಿಯಾಗಿದ್ದರಿಂದ ಉಮೇಶ್ ಪೊಲೀಸರಿಗೆ ತಿಳಿಸಿದ್ದಾರೆ. ಸಿಸಿ ಟಿವಿ ಪರಿಶೀಲನೆ ನಡೆಸಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...