alex Certify
ಕನ್ನಡ ದುನಿಯಾ       Mobile App
       

Kannada Duniya

ಜೀನ್ಸ್, ಸ್ಕರ್ಟ್ ಧರಿಸಿದ್ದ ಹುಡುಗಿಯರಿಗೆ ಇದೆಂಥಾ ಶಿಕ್ಷೆ

wearing_skirt_jeans_02_04_2017

ಕೆಲವೊಂದು ವಿಚಾರದಲ್ಲಿ ಜನರ ಮನೋಭಾವನೆಗಳನ್ನು ಬದಲಿಸಲು ಸಾಧ್ಯವಿಲ್ಲ. ದೇಶ ಬದಲಾದ್ರೂ ಅವರ ಮನಸ್ಸು ಬದಲಾಗೋದಿಲ್ಲ. ಇದಕ್ಕೆ ಗಾಜಿಯಾಬಾದ್ ನಲ್ಲಿ ನಡೆದ ಘಟನೆ ಉತ್ತಮ ಉದಾಹರಣೆ.

ಗಾಜಿಯಾಬಾದ್ ನ ಮುರಾದ್ ನಗರದ ಪುರ್ಸಿ ಗ್ರಾಮದಲ್ಲಿ ಜೀನ್ಸ್, ಸ್ಕರ್ಟ್ ಧರಿಸಿ ಬಂದಿದ್ದು ನಾಲ್ವರು ಹುಡುಗಿಯರಿಗೆ ದುಬಾರಿಯಾಗಿ ಪರಿಣಮಿಸಿದೆ. ಸ್ನೇಹಿತೆ ತಂದೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಾಲ್ವರು ಹುಡುಗಿಯರು ಸ್ನೇಹಿತೆ ಮನೆಗೆ ಬಂದಿದ್ದಾರೆ. ಜೀನ್ಸ್, ಸ್ಕರ್ಟ್ ತೊಟ್ಟ ಹುಡುಗಿಯರಿಗೆ ಗ್ರಾಮಸ್ಥರಿಂದ ಒದೆ ಬಿದ್ದಿದೆ.

ಶುಕ್ರವಾರ ಮುಸ್ಕಾನ್ ತಂದೆ ಸಾವನ್ನಪ್ಪಿದ್ದಾರೆ. ಸಹಪಾಠಿಗೆ ಸಾಂತ್ವಾನ ಹೇಳಲು ಶನಿವಾರ ಸಂಜೆ ಮುರಾದ್ ನಗರದ ರಶ್ಮಿ, ನೀತು, ಸಾಕ್ಷಿ ಮತ್ತು ನೈನಾ ಮುಸ್ಕಾನ್ ಮನೆಗೆ ಬಂದಿದ್ದಾರೆ. ಒಬ್ಬರು ಸ್ಕರ್ಟ್ ಧರಿಸಿದ್ದರೆ. ಉಳಿದ ಮೂವರು ಜೀನ್ಸ್ ಪ್ಯಾಂಟ್ ಧರಿಸಿದ್ದರು. ಮುಸ್ಕಾನ್ ಮನೆಗೆ ಬಂದ ಪಕ್ಕದ ಮನೆಯ ವ್ಯಕ್ತಿ ಇವರ ಡ್ರೆಸ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾನೆ. ನಂತ್ರ ಗ್ರಾಮದವರನ್ನೆಲ್ಲ ಸೇರಿಸಿ ಹುಡುಗಿಯರನ್ನು ರೂಮಿನಲ್ಲಿ ಕೂಡಿ ಹಾಕಿ ಥಳಿಸಿದ್ದಾನೆ. ಅವರಲ್ಲೊಬ್ಬರು ಸಂಬಂಧಿಕರಿಗೆ ಕರೆ ಮಾಡಿದ್ದು, ಪೊಲೀಸ್ ಜೊತೆ ಬಂದ ಸಂಬಂಧಿಕರು ಹುಡುಗಿಯರನ್ನು ರಕ್ಷಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...