alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯನಂತೆ ಚತುರರಾಗಿ ಎಂದು ಸಲಹೆ ನೀಡಿದ ಕೇಂದ್ರ ಮಂತ್ರಿ

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಒರಾಮ್ ಅನಗತ್ಯವಾಗಿ ವಿವಾದವೊಂದಕ್ಕೆ ಕಾರಣವಾಗುವಂತಾ ಹೇಳಿಕೆಯೊಂದನ್ನ ನೀಡಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಬುಡಕಟ್ಟು ಜನರ ಕಾರ್ಯಕ್ರಮವೊಂದರಲ್ಲಿ ಮಲ್ಯನನ್ನು ನೋಡಿ ಕಲಿಯಿರಿ ಎಂದು ಬುದ್ಧಿವಾದ ಹೇಳಿರುವ ವಿಚಾರ ಈಗ ವಿಪಕ್ಷಗಳ ಟೀಕೆಗೆ ಗುರಿಯಾಗುವ ಸಾಧ್ಯತೆಗಳಿವೆ.

ಬುಡಕಟ್ಟು ಸಮುದಾಯದವರು ಕೇವಲ ಶ್ರಮಜೀವಿಗಳಾಗಿದ್ದರಷ್ಟೇ ಅಭಿವೃದ್ಧಿ ಸಾಧ್ಯವಿಲ್ಲ. ನೀವೆಲ್ಲಾ ವಿಜಯ್ ಮಲ್ಯನ ಹಾಗೆ ಸ್ಮಾರ್ಟ್ ಆಗಬೇಕು. ಮಲ್ಯ ಚತುರಮತಿಯಾಗಿದ್ದರಿಂದಲೇ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದು. ಆತ ತನ್ನಷ್ಟೇ ಸ್ಮಾಟ್ ಆದ ತಂಡವನ್ನು ಹೊಂದಿದ್ದರಿಂದಲೇ ಕಿಂಗ್ ಫಿಶರ್ ಅನ್ನೋ ಸಾಮ್ರಾಜ್ಯ ಸ್ಥಾಪನೆ ಸಾಧ್ಯವಾಯ್ತು. ಆದ್ರೆ ಅದರ ಅಂತ್ಯ ಮಾತ್ರ ದುರಾದೃಷ್ಟಕರ ಅಂತ ಒರಾಮ್ ಅಭಿಪ್ರಾಯಪಟ್ಟಿದ್ದಾರೆ.

ಮಲ್ಯ ಯಾರು. ಅವನೊಬ್ಬ ಚತುರ ಬ್ಯುಸಿನೆಸ್ ಮ್ಯಾನ್. ಬ್ಯಾಂಕ್ ಗಳನ್ನ, ಅಧಿಕಾರಿಗಳನ್ನ, ರಾಜಕಾರಣಿಗಳ ಮೇಲೆ ಆತ ಹೇಗೆ ಪ್ರಭಾವ ಬೀರಿದ್ದ ಅನ್ನೋದೇ ನಿಮಗೆ ಮಾದರಿಯಾಗಬೇಕು. ಮಲ್ಯನ ಹಾಗೆ ನೀವು ಚತುರಮತಿಗಳಾಗಬೇಕು ಅಂತ ಒರಾಮ್ ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...