alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ಶಾಪಿಂಗ್ ಮಾಡುವಾಗ ಎಚ್ಚರ

Default

ಆನ್ಲೈನ್ ಶಾಪಿಂಗ್ ಯುಗದಲ್ಲಿ ಆನ್ಲೈನ್ ಮೋಸ ಕೂಡ ಜಾಸ್ತಿಯಾಗ್ತಾ ಇದೆ. ದಿನದಿಂದ ದಿನಕ್ಕೆ ಆನ್ಲೈನ್ ಶಾಪಿಂಗ್ ಮಾಡಿ ಜನ ಮೋಸ ಹೋಗ್ತಿದ್ದಾರೆ. ಜಲಂಧರ್ ನಲ್ಲಿ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ.

ಜಲಂಧರ್ ನಲ್ಲಿ ಅಮನ್ ದೀಪ್ ಎಂಬ ವ್ಯಕ್ತಿ ಆನ್ಲೈನ್ ಕಂಪನಿಯೊಂದರಿಂದ ಮೋಸ ಹೋಗಿದ್ದಾನೆ. ಆತ ಆನ್ಲೈನ್ ಮೂಲಕ 85 ಸಾವಿರ ರೂಪಾಯಿ ಶಾಪಿಂಗ್ ಮಾಡಿದ್ದಾನೆ. ಮೊದಲೇ ಹಣ ತುಂಬಿದ್ದರೂ ಮನೆಗೆ ಖರೀದಿಸಿದ ವಸ್ತುಗಳು ಬರಲಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದಾಗ ಅದು ಮೋಸದ ಕಂಪನಿ ಎಂಬುದು ಗೊತ್ತಾಗಿದೆ.

ಅಮನ್ ಮೊದಲು ಅಮೆರಿಕಾದಲ್ಲಿರುವ ಮುಖ್ಯ ಕಚೇರಿಗೆ ಮೂರ್ನಾಲ್ಕು ಬಾರಿ ಫೋನ್ ಮಾಡಿ ವಿಚಾರಿಸಿದ್ದಾನೆ. ನಂತರ ಅಕೌಂಟ್ ಚೆಕ್ ಮಾಡಿಸಿದ್ದಾನೆ. ಆಗ ಯಾರ ಹೆಸರಲ್ಲಿ ಹಣ ಜಮಾ ಮಾಡಿದ್ದಾನೋ ಅವರ ಖಾತೆ ನಕಲಿ ಎಂಬುದು ಗೊತ್ತಾಗಿದೆ. ನಕಲಿ ಖಾತೆಗೆ ಅವಕಾಶ ನೀಡುವ ಬ್ಯಾಂಕ್ ವಿರುದ್ಧ ಆರೋಪ ಮಾಡಿರುವ ಅಮನ್, ನಕಲಿ ಖಾತೆಗಳನ್ನು ಸೀಲ್ ಮಾಡುವಂತೆ ಆಗ್ರಹಿಸಿದ್ದಾನೆ. ಹಾಗೆ ಎಲ್ಲ ಹಣವನ್ನು ವಾಪಸ್ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...