alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ನಲ್ಲಿ ಕೆಲವರು ಮಾಡ್ತಿದ್ದಾರೆ ಮತ್ತದೇ ಕೆಲಸ

(ILLUSTRATION) An illustration dated 23 January 2012 shows the silhouette of a man in front of a screen with the logo of the online network Facebook in Hanover, Germany. Facebook is being criticized again and again for data privacy. Most recently, Facebook has introduced the Timeline, with which Facebook users can share moments of the entire life with other internet users online. Photo: Julian Stratenschulte  -ALLIANCE-INFOPHOTO

‘ಕನ್ನಡ ದುನಿಯಾ’ ಈ ಹಿಂದೆಯೇ ಈ ಕುರಿತು ವರದಿ ಮಾಡಿತ್ತು. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಅಶ್ಲೀಲ ಚಿತ್ರಗಳ ವೈರಸ್ ಒಂದು ಹರಿದಾಡುತ್ತಿದ್ದು, ಕುತೂಹಲಕ್ಕೆಂದು ಅಪ್ಪಿತಪ್ಪಿಯೂ ಅದರ ಮೇಲೆ ಕ್ಲಿಕ್ ಮಾಡಿ ಮರ್ಯಾದೆ ಕಳೆದುಕೊಳ್ಳಬೇಡಿ ಎಂದು ಎಚ್ಚರಿಸಿತ್ತು. ಆದರೂ ಕೆಲವರು ಕ್ಲಿಕ್ ಮಾಡಿ ಸ್ನೇಹಿತರ ವಲಯದಲ್ಲಿ ತಲೆ ತಗ್ಗಿಸುವಂತಾಗುತ್ತಿದೆ.

ಹೌದು, ಫೇಸ್ ಬುಕ್ ಬಳಸುವಾಗ ನೀವು ಎಚ್ಚರಿಕೆ ವಹಿಸದಿದ್ದರೆ, ನಿಮ್ಮೆಲ್ಲಾ ಫ್ರೆಂಡ್ಸ್ ಗಳ ಬಳಿ ಮುಜುಗರಕ್ಕೆ ಈಡಾಗಬೇಕಾಗುತ್ತದೆ. ಫೇಸ್ ಬುಕ್ ನಲ್ಲಿ ಅಶ್ಲೀಲ ಚಿತ್ರದ ವೈರಸ್ ಒಂದು ಹರಿದಾಡುತ್ತಿದೆ. ಮೈಮರೆತು ನೀವೇನಾದರೂ ಇದನ್ನು ಕ್ಲಿಕ್ ಮಾಡಿದರೇ ನಿಮ್ಮ ಎಲ್ಲಾ ಫ್ರೆಂಡ್ಸ್ ಗಳಿಗೆ ನೀವೇ ಪೋಸ್ಟ್ ಮಾಡಿದಂತೆ ಅಶ್ಲೀಲ ಚಿತ್ರ ಪೋಸ್ಟ್ ಆಗಿಬಿಡುತ್ತವೆ. ಇದನ್ನು ತೆಗೆದುಹಾಕಲೂ ಕೂಡ ನಿಮಗೆ ಸಾಧ್ಯವಾಗುವುದಿಲ್ಲ.

ಹ್ಯಾಕರ್ಸ್ ಗಳು ಈ ರೀತಿ ಅಶ್ಲೀಲ ದೃಶ್ಯವನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದು, ನೀವು ಆಕಸ್ಮಾತ್ ಕುತೂಹಲದಿಂದ ಕ್ಲಿಕ್ಕಿಸಿದರೆ ನಿಮ್ಮ ಅಕೌಂಟ್ ನಲ್ಲಿರುವ ಎಲ್ಲಾ ಸ್ನೇಹಿತರಿಗೆ ಕ್ಷಣಾರ್ಧದಲ್ಲೇ ಪೋಟೋ ನೀವೇ ಪೋಸ್ಟ್ ಮಾಡಿದಂತೆ ಹೋಗಿ ಬಿಡುತ್ತದೆ. ರಿಪೋರ್ಟ್ ಮಾಡಿದರೂ ತಕ್ಷಣಕ್ಕೆ ಸಮಸ್ಯೆಗೆ ಪರಿಹಾರ ಸಿಗುವ ಸಾಧ್ಯತೆ ಇಲ್ಲ. ಹಾಗಾಗಿ, ನೀವೇ ಎಚ್ಚರಿಕೆಯಿಂದ ಫೇಸ್ ಬುಕ್ ಬಳಸಿದರೆ ಒಳ್ಳೆಯದು. ಇಲ್ಲದಿದ್ದರೆ ಸ್ನೇಹಿತರ ಬಳಗದಲ್ಲಿ ತೀವ್ರ ಮುಜುಗರಕ್ಕೊಳಬೇಕಾಗುತ್ತದೆ ಎಚ್ಚರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...