alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ…! ಕತ್ತು ಹಿಸುಕಿ ಲೂಟಿ ಮಾಡ್ತಿದೆ ಗ್ಯಾಂಗ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳ್ಳರ ಕಾಟ ಜೋರಾಗಿದೆ. ಇತ್ತೀಚಿನ ದಿನಗಳಲ್ಲಿ ಕತ್ತು ಹಿಸುಕಿ ದರೋಡೆ ಮಾಡುವ ಪ್ರಕರಣ ಹೆಚ್ಚಾಗಿದೆ. ಹಿಂದಿನಿಂದ ಬಂದು ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸುವ ತಂಡ ಹಣ, ಬಂಗಾರವನ್ನು ಲೂಟಿ ಮಾಡ್ತಿದೆ.

ಬುಧವಾರ ರಾತ್ರಿ ಶಾಹ್ದಾರಾ ಮೆಟ್ರೋ ನಿಲ್ದಾಣದ ಬಳಿ ಘಟನೆ ನಡೆದಿದೆ. ವಿಕಾಸ್ ಗೌಡ ಎಂಬಾತ ಮಧ್ಯರಾತ್ರಿ ಕೆಲಸ ಮುಗಿಸಿ ರೈಲ್ವೆ ನಿಲ್ದಾಣದಿಂದ 100 ಕಿಲೋಮೀಟರ್ ಬಂದಿದ್ದ. ಕ್ಯಾಬ್ ಬುಕ್ ಮಾಡಿ ಕಾಯ್ತಿದ್ದ ವೇಳೆ ಹಿಂದಿನಿಂದ ದಾಳಿ ಮಾಡಿ ಕತ್ತು ಹಿಸುಕಿದ್ದಾರೆ. ವಿಕಾಸ್ ಪ್ರಜ್ಞೆ ತಪ್ಪುತ್ತಿದ್ದಂತೆ ಅವ್ನ ಕೈನಲ್ಲಿದ್ದ ಹಣ, ಆಭರಣ, ಮೊಬೈಲ್ ಲೂಟಿ ಮಾಡಿದ್ದಾರೆ.

10 ಸೆಕೆಂಡ್ ನಲ್ಲಿ ಪ್ರಜ್ಞೆ ತಪ್ಪಿಸುವ ಗ್ಯಾಂಗ್ 5 ನಿಮಿಷದಲ್ಲಿ ಎಲ್ಲವನ್ನೂ ಲೂಟಿ ಮಾಡುತ್ತದೆ. ಪ್ರಜ್ಞೆ ತಪ್ಪಿಸಲು 10 ಸೆಕೆಂಡ್ ಬೇಕಾದ್ರೆ ಮರಳಿ ಪ್ರಜ್ಞೆ ಬರಲು 10 ನಿಮಿಷ ಬೇಕಾಗುತ್ತದೆ. ಈವರೆಗೆ ದೆಹಲಿಯಲ್ಲಿ 8 ಕ್ಕಿಂತಲೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...