alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾಯ್ತು ‘ದೇಶಭಕ್ತ’ ಪತಂಜಲಿ ಜಾಹೀರಾತು

patanjali pas

ಬರೇಲಿ: ಯೋಗಗುರು ಬಾಬಾ ರಾಮ್ ದೇವ್ ಯೋಗದ ಜೊತೆಗೆ, ದೇಶೀಯ ಆಯುರ್ವೇದ ಉತ್ಪನ್ನಗಳನ್ನು ಕೂಡ ಪರಿಚಯಿಸಿದ್ದು, ಯಾವುದೇ, ಬಹುರಾಷ್ಟ್ರೀಯ ಕಂಪನಿಗಳಿಗೆ ಕಡಿಮೆ ಇಲ್ಲದಂತೆ, ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಪತಂಜಲಿ ಸಂಸ್ಥೆಯ ಉತ್ಪನ್ನವಾದ, ಪತಂಜಲಿ ಆಯುರ್ವೇದ ದಂತಕಾಂತಿ ಟೂತ್ ಪೇಸ್ಟ್ ಜಾಹೀರಾತು, ಈಗ ವಿವಾದಕ್ಕೆ ಕಾರಣವಾಗಿದೆ. ದೇಶಭಕ್ತ ಕೋಟ್ಯಾಂತರ ಭಾರತೀಯರು, ಪತಂಜಲಿ ಉತ್ಪನ್ನಗಳನ್ನು ಬಳಸಿದಂತೆ ನೀವೂ ಬಳಸಿ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಅಲ್ಲದೇ, ಮಹಾತ್ಮಾ ಗಾಂಧೀಜಿ, ಭಗತ್ ಸಿಂಗ್, ರಾಮ್ ಪ್ರಸಾದ್ ಬಿಸ್ಮಿಲ್ಲಾ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರು ಸ್ವದೇಶಿ ಉತ್ಪನ್ನಗಳನ್ನು ಬಳಸಲು ಕರೆ ನೀಡಿದ್ದರು. ಅವರ ಕನಸನ್ನು ನನಸಾಗಿಸಲು ಪತಂಜಲಿ ದಂತಕಾಂತಿ ಟೂತ್ ಪೇಸ್ಟ್ ಬಳಸಿ ಎಂದು ಜಾಹೀರಾತಿನಲ್ಲಿ ಹೇಳಲಾಗುತ್ತದೆ.

ಹಾಗಾದರೆ, ಇದನ್ನು ಬಳಸದವರು ದೇಶಭಕ್ತರಲ್ಲವೇ ಎಂದು ಪ್ರಶ್ನಿಸಿ ಬರೇಲಿ ಮೂಲದ ವಕೀಲ ಮಹಮ್ಮದ್ ಜಿಲಾನಿ ಎಂಬುವವರು, ಅಡ್ವರ್ ಟೈಸಿಂಗ್ ಸ್ಟಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ದೂರು ನೀಡಿದ್ದು, ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಜಾಹೀರಾತಿಗೆ ಬಳಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೌನ್ಸಿಲ್ ಇದೀಗ ಈ ದೂರಿನ ಕುರಿತು ಪರಿಶೀಲನ ನಡೆಸುತ್ತಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...