alex Certify
ಕನ್ನಡ ದುನಿಯಾ       Mobile App
       

Kannada Duniya

ಜಮ್ಮು-ಕಾಶ್ಮೀರದಲ್ಲಿ ಶಂಕಿತ ಭಯೋತ್ಪಾದಕನ ಬಂಧನ

sandeep

ಜಮ್ಮು-ಕಾಶ್ಮೀರ ಪೊಲೀಸರು ಲಷ್ಕರ್ –ಇ-ತೊಯ್ಬಾದ ಶಂಕಿತ ಭಯೋತ್ಪಾದಕನೊಬ್ಬನನ್ನು ಬಂಧಿಸಿದ್ದಾರೆ. ಅನಂತ್ನಾಗ್ ನಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಆತ ಉತ್ತರ ಪ್ರದೇಶದ ಮುಜಾಫರ್ನಗರ ನಿವಾಸಿಯೆಂದು ಮೂಲಗಳು ಹೇಳಿವೆ.

ಸಂದೀಪ್ ಕುಮಾರ್ ಶರ್ಮಾ ಅಲಿಯಾಸ್ ಆದಿಲ್ ಬಂಧಿತ ಆರೋಪಿ. ಜಮ್ಮು-ಕಾಶ್ಮೀರದ ಐಜಿ ಮುನೀರ್ ಖಾನ್ ಪ್ರಕಾರ ಇತ್ತೀಚೆಗೆ ಸೇನೆ ಎನ್ಕೌಂಟರ್ ನಲ್ಲಿ ಭಯೋತ್ಪಾದಕನೊಬ್ಬನನ್ನು ಹತ್ಯೆಗೈದಿತ್ತು. ಆತ ವಾಸಿಸುತ್ತಿದ್ದ ಮನೆಯಲ್ಲಿಯೇ ಸಂದೀಪ್ ಸಿಕ್ಕಿಬಿದ್ದಿದ್ದಾನಂತೆ. ಭಯೋತ್ಪಾದಕರ ಜೊತೆ ಸೇರಿ ಸಂದೀಪ್ ಎಟಿಎಂ ಲೂಟಿ ಸೇರಿದಂತೆ ಅನೇಕ ಘಟನೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಸಂದೀಪ್ ಲಷ್ಕರ್ ಜೊತೆ ಸಂಪರ್ಕಹೊಂದಿದ್ದ. ಲಷ್ಕರ್ ಪರ ಆತ ಕೆಲಸ ಮಾಡ್ತಿದ್ದ. ಆತ ಮುಜಾಫರ್ನಗರ ನಿವಾಸಿಯಾಗಿದ್ದು, ಅನಂತ್ನಾಗ್ ನಿವಾಸಿಗಳಿಗೆ ತಾನು ಆದಿಲ್ ಎಂದು ಪರಿಚಯಿಸಿಕೊಂಡಿದ್ದನಂತೆ. ಆತನಿಂದ ಎರಡು ಐಡಿ ಕಾರ್ಡ್ ವಶಕ್ಕೆ ಪಡೆದಿದ್ದಾರೆ ಪೊಲೀಸರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...