alex Certify
ಕನ್ನಡ ದುನಿಯಾ       Mobile App
       

Kannada Duniya

ತಲಾಖ್ ಪೀಡಿತೆಗೆ ಇಂಥ ಶಿಕ್ಷೆ…!?

ತ್ರಿವಳಿ ತಲಾಖ್, ಬಹು ವಿವಾಹದ ವಿರುದ್ಧ ಧ್ವನಿ ಎತ್ತಿದ್ದ ಬರೇಲಿಯ ಆಲಾ ಹಜರತ್ ಕುಟುಂಬದ ಮಾಜಿ ಸೊಸೆ ನಿದಾ ಖಾನ್ ವಿರುದ್ಧ ಫತ್ವಾ ಹೊರಡಿಸಲಾಗಿದೆ. ನಿದಾ ಖಾನ್ ವಿರುದ್ಧ ಇಸ್ಲಾಮಿಕ್ ಕಾನೂನು ವಿರೋಧಿಸಿರುವ ಆರೋಪವಿದೆ. ಇದೇ ಕಾರಣಕ್ಕೆ ಮುಸ್ಲಿಂ ಸಮುದಾಯ ನಿದಾ ಖಾನ್ ರನ್ನು ಬಹಿಷ್ಕರಿಸಿದೆ.

ಸೋಮವಾರ ಬರೇಲಿ ಮುಫ್ತಿ ಖುರ್ಷಿದ್ ಇಮಾಮ್ ಪತ್ರಿಕಾಗೋಷ್ಠಿ ನಡೆಸಿ ನಿದಾ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ನಿದಾ ಇಸ್ಲಾಮಿಕ್ ಕಾನೂನಿನ ವಿರೋಧ ಮಾಡಿದ್ದಾಳೆ. ಹಾಗಾಗಿ ಅವ್ರನ್ನು ಮುಸ್ಲಿಂ ಸಮುದಾಯದಿಂದ ಹೊರ ಹಾಕಲಾಗಿದೆ. ಆಕೆಯನ್ನು ಭೇಟಿ ಮಾಡುವ ಮುಸ್ಲಿಂ ಸಮುದಾಯದವರಿಗೂ ಎಚ್ಚರಿಕೆ ನೀಡಲಾಗಿದೆ. ನಿದಾ ಜೊತೆ ಮಾತನಾಡಿದ್ರೆ, ಸಹಾಯ ಮಾಡಿದ್ರೆ ಧರ್ಮದಿಂದ ಹೊರ ಹಾಕುವುದಾಗಿ ಫತ್ವಾದಲ್ಲಿ ಹೇಳಲಾಗಿದೆ.

ನಿದಾ ಅನಾರೋಗ್ಯಕ್ಕೆ ತುತ್ತಾದ್ರೆ ಆಕೆಗೆ ಔಷಧಿ ನೀಡುವಂತಿಲ್ಲ. ಸಾವನ್ನಪ್ಪಿದ್ರೆ ನಮಾಜ್ ಮಾಡುವಂತಿಲ್ಲ. ಮುಸ್ಲಿಂ ಸ್ಮಶಾನದಲ್ಲಿ ದಫನ್ ಮಾಡುವಂತಿಲ್ಲವೆಂದು ಫತ್ವಾದಲ್ಲಿ ಹೇಳಲಾಗಿದೆ. ಜುಲೈ 16,2015 ರಂದು ನಿದಾ ಮದುವೆ ನಡೆದಿತ್ತು. 2016 ರಲ್ಲಿ ತಲಾಕ್ ಆಗಿತ್ತು. ಇದಾದ ನಂತ್ರ ನಿದಾ ಕೋರ್ಟ್ ಮೆಟ್ಟಿಲೇರಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...