alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತ ಮೋದಿ ಭೇಟಿಗೆ ಭಾರತಕ್ಕೆ ಬರ್ತಿದ್ದಾರೆ ಒಬಾಮಾ

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಶೀಘ್ರವೇ ಭಾರತಕ್ಕೆ ಬರಲಿದ್ದಾರೆ. ಮುಂದಿನ ವಾರವೇ ಒಬಾಮಾ ಭಾರತಕ್ಕೆ ಬರುವ ಸಾಧ್ಯತೆಯಿದೆ. ಭಾರತ ಭೇಟಿ ವೇಳೆ ಒಬಾಮಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಬರಾಕ್ ಒಬಾಮಾ 2015ರಲ್ಲಿ ಅಮೆರಿಕಾ ಅಧ್ಯಕ್ಷರಾಗಿದ್ದ ವೇಳೆ ಭಾರತಕ್ಕೆ ಭೇಟಿ ನೀಡಿದ್ದರು. ಗಣರಾಜ್ಯೋತ್ಸವದಂದು ಒಬಾಮಾ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು. ನಂತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ರೆಡಿಯೋ ಮೂಲಕ ಜನರನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಆಪ್ತರಾಗಿದ್ದ ಮೋದಿ ಹಾಗೂ ಒಬಾಮಾರನ್ನು ಉತ್ತಮ ಸ್ನೇಹಿತರು ಎಂದೇ ಪರಿಗಣಿಸಲಾಗ್ತಿದೆ.

ಒಬಾಮಾ ಭಾರತ ಭೇಟಿ ವೇಳೆ ಅನೇಕ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತವೊಂದೇ ಅಲ್ಲ ಚೀನಾ ಹಾಗೂ ಫ್ರಾನ್ಸ್ ಗೂ ಒಬಾಮಾ ಭೇಟಿ ನೀಡಲಿದ್ದಾರೆ. ಈ ಮೂರು ದೇಶಗಳ ಭೇಟಿ ವೇಳೆ ಒಬಾಮಾ ಅನೇಕ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...