alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಕಚೇರಿಗಳಲ್ಲಿ ಸ್ಮಾರ್ಟ್ಫೋನ್ ಬ್ಯಾನ್

smartphone_effects-620x400

ಸ್ಕೂಲ್ ಹಾಗೂ ಕಾಲೇಜುಗಳಲ್ಲಿ ಸ್ಮಾರ್ಟ್ಫೋನ್ ಬಳಕೆಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಈಗ ಸರ್ಕಾರಿ ಕಚೇರಿಗಳ ಸರದಿ. ರಾಜಸ್ಥಾನದ ಉದಯ್ಪುರ ಜಿಲ್ಲೆಯ ನೀರಾವರಿ ಇಲಾಖೆ ತನ್ನ ಸಿಬ್ಬಂದಿಗೆ ಸ್ಮಾರ್ಟ್ಫೋನ್ ಬಳಕೆಯನ್ನು ನಿಷೇಧಿಸಿದೆ. ಈ ಬಗ್ಗೆ ಉದ್ಯೋಗಿಗಳಿಗೆ ನೊಟೀಸ್ ಜಾರಿಮಾಡಿದೆ.

ನೊಟೀಸ್ ಪ್ರಕಾರ ಸಿಬ್ಬಂದಿ ಆಗಸ್ಟ್ 8ರಿಂದ ಕಚೇರಿಯಲ್ಲಿ ಸ್ಮಾರ್ಟ್ಫೋನ್ ಬಳಸುವಂತಿಲ್ಲ. ಒಂದು ವೇಳೆ ಸ್ಮಾರ್ಟ್ಫೋನ್ ಬಳಸಿದ್ರೆ ಅವರ ಆ ದಿನದ ಸಂಬಳ ಕಟ್ ಆಗಲಿದೆ. ಸರ್ಕಾರಿ ಕೆಲಸಗಳು ಆದಷ್ಟು ಬೇಗ, ಸರಿಯಾಗಿ ಮುಗಿಯಲಿ ಎನ್ನುವ ಉದ್ದೇಶದಿಂದ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಈ ನಿಯಮ ಕೇವಲ ಕಚೇರಿ ಸಿಬ್ಬಂದಿಗೆ ಮಾತ್ರ ಸೀಮಿತವಾಗಿಲ್ಲ. ಕಚೇರಿಗೆ ಬರುವ ಸಾರ್ವಜನಿಕರಿಗೂ ಅನ್ವಯಿಸಲಿದೆ. ಒಂದು ವೇಳೆ ಸಾರ್ವಜನಿಕರು ಇಲಾಖೆ ಆವರಣದಲ್ಲಿ ಸ್ಮಾರ್ಟ್ಫೋನ್ ಬಳಕೆ ಮಾಡಿದ್ರೆ 500 ರೂಪಾಯಿ ದಂಡ ವಿಧಿಸಲಾಗುವುದು. ಬಹಳ ಮುಖ್ಯವಾದ ಸೂಚನೆ ರವಾನೆ ಮಾಡುವುದಿದ್ದರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಚೇರಿ ಫೋನ್ ಬಳಸಬಹುದೆಂದು ನೊಟೀಸ್ ನಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...