alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯ ಬಳಿ ಎಷ್ಟು ಸಂಪತ್ತಿದೆ…? ಬ್ಯಾಂಕ್ ಗೂ ಇಲ್ಲ ಈ ಬಗ್ಗೆ ಮಾಹಿತಿ

ಮದ್ಯದ ದೊರೆ ಮಲ್ಯ ಎಷ್ಟು ಆಸ್ತಿ ಹೊಂದಿದ್ದಾರೆಂಬುದು ಯಾರಿಗೂ ತಿಳಿದಿಲ್ಲ. ಬ್ರಿಟಿಷ್ ಕೋರ್ಟ್ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿರುವ ಮಲ್ಯ ಸಂಪತ್ತು ಜಪ್ತಿಗೆ ಆದೇಶ ನೀಡಿದೆ. ಆದ್ರೆ ಮಲ್ಯ ಬಳಿ ಎಷ್ಟು ಸಂಪತ್ತಿದೆ ಎಂಬ ಮಾಹಿತಿ ಮಾತ್ರ ಈವರೆಗೂ ಲಭ್ಯವಾಗಿಲ್ಲ.

ಎನ್ಫೋರ್ಸ್ಮೆಂಟ್ ಅಧಿಕಾರಿಗಳಿಗೆ ಮಲ್ಯರ 10,499 ಕೋಟಿ ರೂಪಾಯಿ ಆಸ್ತಿ ವಸೂಲಿ ಮಾಡುವಂತೆ ಆದೇಶ ಸಿಕ್ಕಿದೆ. ಆದ್ರೆ ವಸೂಲಾದ ಹಣದಿಂದ ಭಾರತೀಯ ಬ್ಯಾಂಕ್ ಗಳ ಸಾಲ ತೀರೋದು ಅನುಮಾನ. ಹೈಕೋರ್ಟ್ ಆದೇಶದ ನಂತ್ರ ಭಾರತೀಯ ಬ್ಯಾಂಕ್ ಗಳು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದವು. ಅಲ್ಲಿ ಜಪ್ತಿಯಾದ ಆಸ್ತಿಯಿಂದ ಮಲ್ಯ ಸಾಲ ಮರುಪಾವತಿಯಾಗಲಿದೆ ಎಂದುಕೊಂಡಿದ್ದವು. ಆದ್ರೆ ಮಲ್ಯ ಬಳಿ ವಿದೇಶದಲ್ಲಿ ಎಷ್ಟು ಹಣವಿದೆ ಎನ್ನುವ ಮಾಹಿತಿ ಯಾರಿಗೂ ಲಭ್ಯವಿಲ್ಲ.

ಮೇ 8 ರಂದು ಬ್ರಿಟಿಷ್ ಕೋರ್ಟ್ ಮಲ್ಯ ಆಸ್ತಿ ಜಪ್ತಿಗೆ ಆದೇಶ ನೀಡಿದೆ. ಈ ಆದೇಶದ ನಂತ್ರ ಮಲ್ಯ ಹೇಳಿಕೆ ನೀಡಿದ್ದಾರೆ. ವಿದೇಶದಲ್ಲಿ ಮಲ್ಯ ತುಂಬಾ ಆಸ್ತಿ ಹೊಂದಿಲ್ಲ. ನನ್ನ ಬಳಿ ವಾಹನ ಹಾಗೂ ಸ್ವಲ್ಪ ಬಂಗಾರವಿದ್ದು ಅದನ್ನು ಕೋರ್ಟ್ ಗೆ ಒಪ್ಪಿಸುತ್ತೇನೆ ಎಂದಿದ್ದಾರೆ.

2016 ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಗೆ ಮಲ್ಯ ನೀಡಿದ್ದ ವರದಿ ಪ್ರಕಾರ ವಿದೇಶದಲ್ಲಿ ಮಲ್ಯ ತನ್ನ ಹೆಸರಿನಲ್ಲಿ ಹೆಚ್ಚು ಆಸ್ತಿ ಮಾಡಿಲ್ಲ. ಎಲ್ಲ ಆಸ್ತಿ ಕುಟುಂಬದವರ ಹೆಸರಿನಲ್ಲಿದೆ. ಇಂಗ್ಲೆಂಡ್ ನಲ್ಲಿರುವ ಮನೆ ಅವ್ರ ತಾಯಿ ಹೆಸರಿನಲ್ಲಿದೆ. ಮಲ್ಯ, ಕುಟುಂಬದ ಟ್ರಸ್ಟ್ ಹೆಸರಿನಲ್ಲಿ ಹಣವಿಟ್ಟಿದ್ದಾರೆ. ಅಮೆರಿಕಾದಲ್ಲಿರುವ ಪತ್ನಿ ಹಾಗೂ ಮಕ್ಕಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. 2016 ರಲ್ಲಿ ಮಲ್ಯ 40 ಮಿಲಿಯನ್ ಡಾಲರ್ ಹಣವನ್ನು ಪತ್ನಿ ಅಕೌಂಟ್ ಗೆ ಹಾಕಿದ್ದಾರೆ. ವಿದೇಶದಲ್ಲಿ ಮಲ್ಯ ನಗದು ಹೊಂದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಆಸ್ತಿಯಿದ್ದು, ಅದ್ರಿಂದ ಬ್ಯಾಂಕ್ ಸಾಲ ತೀರಲು ಸಾಧ್ಯವಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...