alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ಬದಲಿಸುವವರಿಗೊಂದು ಬ್ಯಾಡ್ ನ್ಯೂಸ್

queue

500 ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದಾಗಿನಿಂದ ದೇಶದ ಜನರಲ್ಲಿ ಗೊಂದಲ, ಚಿಂತೆ ಮನೆ ಮಾಡಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿತ್ತು. ಆದ್ರೆ ಯೋಜನೆ ಜಾರಿಗೆ ತರುವ ಮುನ್ನ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಂತೆ ಕಾಣ್ತಾ ಇಲ್ಲ. ಹಾಗಾಗಿ ಈಗ ಸಾರ್ವಜನಿಕರು ತೊಂದರೆಪಡುವಂತಾಗಿದೆ.

ಪ್ರತಿದಿನ ಕ್ಯೂನಲ್ಲಿ ನಿಂತು 4 ಸಾವಿರ ರೂಪಾಯಿ ಬದಲಾಯಿಸಿಕೊಳ್ಳಬಹುದೆಂದು ಕೆಲವರು ಅಂದುಕೊಂಡಿದ್ದರು. ಆದ್ರೆ ಈ ಬಗ್ಗೆ ಸರಿಯಾದ ಮಾಹಿತಿ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಮಾಹಿತಿ ಪ್ರಕಾರ, ನವೆಂಬರ್ 24ರವರೆಗೆ ಒಮ್ಮೆ ಮಾತ್ರ ನಾಲ್ಕು ಸಾವಿರ ರೂಪಾಯಿಯನ್ನು ಬದಲಾಯಿಸಿಕೊಳ್ಳಬಹುದೆನ್ನಲಾಗ್ತಾ ಇದೆ.

ಇದಲ್ಲದೆ ಇನ್ನೂ ಅನೇಕ ನಿಯಮಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಸಿಗ್ತಾ ಇಲ್ಲ. ಕ್ಯೂನಲ್ಲಿ ನಿಂತು ವಾಪಸ್ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವಾರದಲ್ಲಿ ಕೇವಲ 10 ಸಾವಿರ ರೂಪಾಯಿಯನ್ನು ಮಾತ್ರ ಎಟಿಎಂನಿಂದ ತೆಗೆಯಬಹುದಾಗಿದೆ. 15 ದಿನಗಳಲ್ಲಿ 20 ಸಾವಿರ ರೂಪಾಯಿಯನ್ನು ಮಾತ್ರ ಎಟಿಎಂನಿಂದ ತೆಗೆಯಬಹುದು. ಹಾಗೆ 2 ಸಾವಿರ ರೂಪಾಯಿ ನೋಟು ಕೇವಲ 15 ದಿನದಲ್ಲಿ ಒಮ್ಮೆ ಮಾತ್ರ ನಿಮಗೆ ಸಿಗಲಿದೆ. ಈ ಬಗ್ಗೆ ಗೊಂದಲದಲ್ಲಿರುವ ಜನರು ಬ್ಯಾಂಕ್ ಹಾಗೂ ಎಟಿಎಂ ಮುಂದೆ ಗಂಟೆಗಟ್ಟಲೆ ನಿಂತು ನಂತ್ರ ನಿರಾಶರಾಗಿ ವಾಪಸ್ ಬರ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...