alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲದ ಬದಲು ಸೆಕ್ಸ್ ಕೇಳಿದ್ದ ಬ್ಯಾಂಕ್ ಮ್ಯಾನೇಜರ್

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಹೇಸಿಗೆ ಕೆಲಸವನ್ನು ಕಾಂಗ್ರೆಸ್ ನಾಯಕ ಅಶೋಕ್ ಚೌಹಾಣ್ ಖಂಡಿಸಿದ್ದಾರೆ. ಪ್ರಗತಿಪರ ಮಹಾರಾಷ್ಟ್ರದಲ್ಲಿ ಇಂಥ ಘಟನೆ ಅವಮಾನಕರ ಎಂದಿದ್ದಾರೆ.

ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ರಾಜೇಶ್ ವಿರುದ್ಧ ಕಳೆದ ಗುರುವಾರ ದೂರೊಂದು ದಾಖಲಾಗಿದೆ. ರಾಜೇಶ್ ಬೆಳೆ ಸಾಲಕ್ಕೆ ಬದಲಾಗಿ ಲೈಂಗಿಕ ಸಂಬಂಧ ಬಯಸಿದ್ದಾನೆ. ದತ್ತಾಲಾ ಗ್ರಾಮದ ಮಹಿಳೆ ಬೆಲೆ ಸಾಲ ಕೇಳಲು ಪತಿ ಜೊತೆ ಬ್ಯಾಂಕ್ ಗೆ ಬಂದಿದ್ದಳಂತೆ. ಈ ವೇಳೆ ಆಕೆ ನಂಬರ್ ಪಡೆದಿದ್ದ ಮ್ಯಾನೇಜರ್ ಬ್ಯಾಂಕ್ ಸಾಲ ಬೇಕಾದ್ರೆ ಒಂದು ರಾತ್ರಿ ನನ್ನ ಜೊತೆ ಕಳೆಯಬೇಕೆಂದು ಬೇಡಿಕೆಯಿಟ್ಟಿದ್ದಾನೆ.

ನಂತ್ರ ವೈಸ್ ಕಾಲ್ ಒಂದನ್ನು ಕಳುಹಿಸಿದ್ದಾನೆ. ಇದೆಲ್ಲ ಸಾಕ್ಷಿ ಹಿಡಿದು ಪೊಲೀಸ್ ಠಾಣೆಗೆ ಬಂದ ಮಹಿಳೆ ಮ್ಯಾನೇಜರ್ ವಿರುದ್ಧ ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಇದನ್ನು ಖಂಡಿಸಿರುವ ಚೌಹಾಣ್, ಬೆಳೆ ಸಾಲ ತೀರಿಸಲಾಗದೆ ರೈತರು ಒದ್ದಾಡುತ್ತಿದ್ದಾರೆ. ಈ ಮಧ್ಯೆ ಬ್ಯಾಂಕ್ ಮ್ಯಾನೇಜರ್ ನಡೆದುಕೊಂಡ ನಡೆ ಆಶ್ಚರ್ಯ ಹಾಗೂ ಖಂಡನೀಯ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...