alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಸ್ತ್ರನಾಗಿ ಬ್ಯಾಂಕ್ ಗೆ ನುಗ್ಗಿದ ಕಳ್ಳ ಮಾಡಿದ್ದೇನು..?

sbi

ಪಠಾಣ್ ಕೋಠ್ ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ವಿಚಿತ್ರವಾದ ದರೋಡೆ ನಡೆದಿದೆ. ಮೈಮೇಲೆ ಬಟ್ಟೆಯೇ ಇಲ್ಲದೆ ಬ್ಯಾಂಕ್ ನೊಳಗೆ ನುಗ್ಗಿದ ಕಳ್ಳ ಹಣದ ಕಡೆಗೆ ಕಣ್ಣೆತ್ತಿಯೂ ನೋಡಿಲ್ಲ. ಬದಲಾಗಿ ಅಲ್ಲಿದ್ದ ಕೆಲವು ಬೂಟುಗಳು ಮತ್ತು ಪಾತ್ರೆಗಳನ್ನು ಮಾತ್ರ ಹೊತ್ತೊಯ್ದಿದ್ದಾನೆ.

ಬ್ಯಾಂಕ್ ಗೋಡೆಗೆ ಕನ್ನ ಹಾಕಿದ್ದ ದರೋಡೆಕೋರ ರಾತ್ರೋರಾತ್ರಿ ಒಳನುಗ್ಗಿದ್ದಾನೆ. ಅವನ ಮೈಮೇಲೆ ಬಟ್ಟೆಯೇ ಇರಲಿಲ್ಲ, ಆತ ಸಂಪೂರ್ಣ ನಗ್ನನಾಗಿದ್ದ. ಸುಮಾರು ಒಂದು ಗಂಟೆ ಆತ ಬ್ಯಾಂಕ್ ನೊಳಗೇ ಇದ್ದ. ಒಂದು ಜೊತೆ ಬೂಟು, ಎರಡು ಕುಕ್ಕರ್ ಹಾಗೂ ಒಂದು ಬಾಣೆಲೆಯನ್ನು ತೆಗೆದುಕೊಂಡು ತಾನೇ ಮಾಡಿದ್ದ ರಂಧ್ರದ ಮೂಲಕ ಹೊರಟು ಹೋಗಿದ್ದಾನೆ.

ಈ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಕೂಡ ನಡೆಯುತ್ತಿದೆ. ಬ್ಯಾಂಕ್ ನೊಳಕ್ಕೆ ನುಗ್ಗಿದ್ದ ಕಳ್ಳ ಮಾನಸಿಕ ಅಸ್ವಸ್ಥನಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...