alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರಿಗೇ ಪ್ಯಾನ್ ಕಾರ್ಡ್ ಕೇಳಿದ ಬ್ಯಾಂಕ್

Mahaveer_Bhagwan

ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಹೋಗಿ ಹೇಗೆಲ್ಲಾ ಯಡವಟ್ಟುಗಳಾಗುತ್ತವೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಇತ್ತೀಚೆಗೆ ಎಲ್ಲಾ ಕೆಲಸಗಳಿಗೂ ಸಾಮಾನ್ಯವಾಗಿ ದಾಖಲೆ ಕೇಳುತ್ತಾರೆ. ಅದರಲ್ಲಿಯೂ ಬ್ಯಾಂಕ್ ನಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.

ಹೆಚ್ಚು ಮೊತ್ತದ ವ್ಯವಹಾರ ನಡೆಸುವ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಹೀಗೆ ಭಗವಾನ್ ಮಹಾವೀರನಿಗೆ ಪ್ಯಾನ್ ಕಾರ್ಡ್ ಹಾಜರುಪಡಿಸುವಂತೆ ಬ್ಯಾಂಕ್ ಸಿಬ್ಬಂದಿ ಸೂಚಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಶಿವಪುರಿ ಜಿಲ್ಲೆಯ ಮಧ್ಯಂಚಲ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಭಗವಾನ್ ಮಹಾವೀರ ದಿಗಂಬರ ಜೈನ ಮಂದಿರ ಹೆಸರಲ್ಲಿ ಖಾತೆ ತೆರೆಯಲಾಗಿದೆ. ಈ ಖಾತೆಯಲ್ಲಿ ಇಟ್ಟಿರುವ ಮೊತ್ತಕ್ಕೆ 10 ಸಾವಿರಕ್ಕೂ ಹೆಚ್ಚಿನ ಬಡ್ಡಿ ಬರುತ್ತಿದೆ ಎನ್ನಲಾಗಿದೆ.

ಆದಾಯ ತೆರಿಗೆ ಇಲಾಖೆ ನಿಯಮದ ಪ್ರಕಾರ ತೆರಿಗೆ ಕಡಿತ ಮಾಡಬೇಕಿದ್ದು, ಅದಕ್ಕಾಗಿ ಪ್ಯಾನ್ ಕಾರ್ಡ್ ಹಾಜರುಪಡಿಸುವಂತೆ ಬ್ಯಾಂಕ್ ಸಿಬ್ಬಂದಿ ಕೇಳಿದ್ದಾರೆ ಎನ್ನಲಾಗಿದೆ. ಯಾರ ಹೆಸರಿನಲ್ಲಿ ಖಾತೆ ಇದೆಯೋ ಅವರ ಪ್ಯಾನ್ ಕಾರ್ಡ್ ತರಬೇಕು ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದು, ಇದರಿಂದ ದೇವಾಲಯದ ಆಡಳಿತ ಮಂಡಳಿಯವರು ಪೇಚಿಗೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...