alex Certify
ಕನ್ನಡ ದುನಿಯಾ       Mobile App
       

Kannada Duniya

ಬೇರೆಡೆಗಿಂತ ಬೆಂಗಳೂರೇ ಸೇಫ್..!

bengaluru cityರಾಜಧಾನಿ ಬೆಂಗಳೂರಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯೇನಿಲ್ಲ. ಕೊಲೆ, ಸುಲಿಗೆ, ದರೋಡೆ ಪ್ರತಿದಿನ ನಡೆಯುತ್ತಿರುತ್ತದೆ. ಆದ್ರೂ ಉಳಿದ ಚಿಕ್ಕ ಚಿಕ್ಕ ಪಟ್ಟಣಗಳಿಗೆ ಹೋಲಿಸಿದ್ರೆ ಸಿಲಿಕಾನ್ ಸಿಟಿಯೇ ಸೇಫ್. ಅಪರಾಧ ಚಟುವಟಿಕೆಗಳಲ್ಲಿ 53 ದೊಡ್ಡ ನಗರಗಳ ಪೈಕಿ ಬೆಂಗಳೂರಿಗೆ 3ನೇ ಸ್ಥಾನ.

ದೆಹಲಿ ಮತ್ತು ಪಾಟ್ನಾ ತಲಾ ಮೊದಲನೆಯ ಹಾಗೂ ಎರಡನೇ ಸ್ಥಾನದಲ್ಲಿವೆ. ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ ನೀಡಿದ ವಿವರ ಇದು. ಕೊಲೆ, ವರದಕ್ಷಿಣೆ ಸಾವು ಮತ್ತು ಹಲ್ಲೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಮೂರನೇ ಸ್ಥಾನ. ಉಳಿದ ಪಟ್ಟಣಗಳಲ್ಲಿ ಇವುಗಳ ಸಂಖ್ಯೆ ಬೆಂಗಳೂರಿಗಿಂತಲೂ ಅಧಿಕ. 2015ರಲ್ಲಿ ಬೆಂಗಳೂರಲ್ಲಿ 188 ಕೊಲೆ ಪ್ರಕರಣ ಸೇರಿದಂತೆ 201 ಮಂದಿ ಹತ್ಯೆಗೀಡಾಗಿದ್ದಾರೆ. ದೆಹಲಿಯಲ್ಲಿ 464 ಹಾಗೂ ಪಾಟ್ನಾದಲ್ಲಿ 232 ಪ್ರಕರಣಗಳು ನಡೆದಿವೆ. ಬೆಂಗಳೂರಲ್ಲಿ 1 ಲಕ್ಷ ಜನಸಂಖ್ಯೆಯಲ್ಲಿ ಶೇ. 2.2 ಕೊಲೆ ಪ್ರಕರಣಗಳು ದಾಖಲಾಗಿವೆ. ಪಾಟ್ನಾದಲ್ಲಿ 11.3, ಮೀರತ್ ನಲ್ಲಿ 5.8, ಜೋಧ್ ಪುರದಲ್ಲಿ 5.1, ದೆಹಲಿಯಲ್ಲಿ 4.1 ಪ್ರಕರಣಗಳು ವರದಿಯಾಗಿವೆ. ಕೊಲೆ ಯತ್ನ ಪ್ರಕರಣಗಳಲ್ಲಿ ಬೆಂಗಳೂರು 2ನೇ ಸ್ಥಾನ ಪಡೆದಿದೆ.

ದೆಹಲಿ  ಅಗ್ರಸ್ಥಾನದಲ್ಲಿದ್ರೆ, ಮುಂಬೈ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಆದ್ರೆ ಬೇರೆ ನಗರಗಳಿಗೆ ಹೋಲಿಸಿದ್ರೆ ಉದ್ಯಾನನಗರಿಯಲ್ಲಿ ಅತ್ಯಾಚಾರ ಪ್ರಕರಣಗಳು ಕೊಂಚ ಕಡಿಮೆ. ಯಾಕಂದ್ರೆ ಬೆಂಗಳೂರು 11ನೇ ಸ್ಥಾನದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...