alex Certify
ಕನ್ನಡ ದುನಿಯಾ       Mobile App
       

Kannada Duniya

ಮರದ ಪಟ್ಟ ಕಳೆದುಕೊಂಡ ಬಿದಿರು

ನವದೆಹಲಿ: ಬಿದಿರು ಇನ್ನುಮುಂದೆ ನಾಡಿನಲ್ಲಿ ಮರವಲ್ಲ. ಅದು ಕಾಡಿನಲ್ಲಿ ಮರವಾಗಿದ್ದು, ನಾಡಿನಲ್ಲಿ ಅದನ್ನು ಮರದ ವ್ಯಾಖ್ಯೆಯಿಂದ ಹೊರಗಿಡಲಾಗಿದೆ.

ದೇಶದಲ್ಲಿ ಬಿದಿರು ಪ್ಲಾಂಟೇಷನ್ ಗಳನ್ನು ಉತ್ತೇಜಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

1927 ರ ಭಾರತೀಯ ಅರಣ್ಯ ಕಾಯ್ದೆಗೆ ಬಿದಿರು ಮರವಲ್ಲ ಎಂಬ ಬಗ್ಗೆ ತಿದ್ದುಪಡಿ ಮಾಡಲಾಗಿದ್ದು, ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಗೀಕಾರ ನೀಡಿದ್ದಾರೆ.

ಬಿದಿರನ್ನು ಪ್ಲಾಂಟೇಷನ್ ಬೆಳೆಯಲು ಉತ್ತೇಜಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬಿದಿರನ್ನು ಕಡಿಯಲು ಸಾಗಾಟ ಮಾಡಲು ಅನುಮತಿ ಪಡೆಯಬೇಕೆಂಬ ನಿಯಮವನ್ನು ಸಡಿಲಿಸಲಾಗಿದೆ.

1980 ರ ಅರಣ್ಯ ಸಂರಕ್ಷಣಾ ಕಾಯ್ದೆಯಂತೆ ಕಾಡಿನ ಪ್ರದೇಶಗಳಲ್ಲಿ ಬೆಳೆಯುವ ಬಿದಿರನ್ನು ಮುಂದೆಯೂ ಮರವೆಂದೇ ಪರಿಗಣಿಸಲಾಗುತ್ತದೆ. 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಬಿದಿರು ಪ್ಲಾಂಟೇಷನ್ ಗಳಿಗೆ ಉತ್ತೇಜನ ನೀಡಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...