alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿ ಕೊಟ್ಟ ಏಟಿಗೆ ಹಾರಿಹೋಯ್ತು ಬಾಲಕಿಯ ಪ್ರಾಣ

ಉತ್ತರ ಪ್ರದೇಶದಲ್ಲಿ ಶಿಕ್ಷಕಿ ಕಪಾಳ ಮೋಕ್ಷ ಮಾಡಿದ ರಭಸಕ್ಕೆ 5ನೇ ತರಗತಿ ವಿದ್ಯಾರ್ಥಿನಿಯ ಪ್ರಾಣವೇ ಹೋಗಿದೆ. ಶಿಕ್ಷಕಿ ರಜನಿ ಉಪಾಧ್ಯಾಯ ಎಂಬಾಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.

11 ವರ್ಷದ ಬಾಲಕಿ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ಲು. ಯಾವುದೋ ಕಾರಣಕ್ಕೆ ಸಿಟ್ಟಾದ ಶಿಕ್ಷಕಿ ರಜನಿ, ವಿದ್ಯಾರ್ಥಿನಿಯ ಕಪಾಳಕ್ಕೆ ಬಾರಿಸಿದ್ದಾರೆ. ಏಟು ತಿಂದ ಬಾಲಕಿ ಸ್ಥಳದಲ್ಲೇ ಕುಸಿದು ಬಿದ್ದಿದ್ಲು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯ್ತು.

ಆದ್ರೆ ಮೆದುಳಿನ ನರಗಳಿಗೆ ಪೆಟ್ಟು ಬಿದ್ದಿದ್ದರಿಂದ ಬಾಲಕಿಗೆ ಪ್ರಜ್ಞೆ ಮರಳಲೇ ಇಲ್ಲ. ಏಟು ತಿಂದು ಎರಡು ದಿನಗಳ ನಂತರ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾರೆ. ಶಿಕ್ಷಕಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಪೋಷಕರು, ಶಾಲೆಯ ಮುಂದೆ ಶವವನ್ನಿಟ್ಟುಕೊಂಡು ಪ್ರತಿಭಟನೆ ಕೂಡ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...