alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಮದುವೆ ಚಿಂತೆಯಲ್ಲಿ ಚಿತೆಯೇರಿದ ತಂದೆ

new-delhi

ನೋಟು, ನೋಟು, ನೋಟು. ಈಗ ನೋಟಿನದೆ ಸುದ್ದಿ. ಮನೆಯಲ್ಲಿ ಮದುವೆ. ಹಣ ಸಿಗ್ತಾ ಇಲ್ಲ ಎನ್ನೋದು ಕೆಲವರ ನೋವು. ಈ ನಡುವೆ ಮಗಳ ಮದುವೆ ಚಿಂತೆಯಲ್ಲಿ ತಂದೆಯೊಬ್ಬ ಸಾವನ್ನಪ್ಪಿದ್ದಾನೆ.

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಘಟನೆ ನಡೆದಿದೆ. ದೆಹಲಿಯಲ್ಲಿ ಕೆಲಸ ಮಾಡುವ 45 ವರ್ಷದ ಸುರೇಶ್, ಮಗಳ ಎಂಗೇಜ್ ಮೆಂಟ್ ಫಿಕ್ಸ್ ಆಗಿತ್ತು. ಬುಧವಾರ ನಡೆಯಬೇಕಿದ್ದ ನಿಶ್ಚಿತಾರ್ಥಕ್ಕೆ ವಸ್ತುಗಳನ್ನು ಖರೀದಿಸುವ ಉದ್ದೇಶದಿಂದ ಸುರೇಶ್ ಸ್ಟೇಟ್ ಬ್ಯಾಂಕ್ ಶಾಖೆ ಮುಂದೆ ಮಂಗಳವಾರ ನಿಂತಿದ್ದ. ಬೆಳಿಗ್ಗಿನಿಂದ ರಾತ್ರಿಯವರೆಗೆ ನಿಂತ್ರೂ ಹಣ ಬದಲಾವಣೆ ಆಗಲಿಲ್ಲ. ಇದೇ ಚಿಂತೆಯಲ್ಲಿದ್ದ ಸುರೇಶ್ ಗೆ ರಾತ್ರಿ ಹೃದಯಾಘಾತವಾಗಿದೆ.

ಗ್ರಾಮಸ್ಥರು ಹಾಗೂ ಸಂಬಂಧಿಕರು ಬುಧವಾರ ಬೆಳಿಗ್ಗೆ ಸುರೇಶ್ ಅಂತ್ಯಕ್ರಿಯೆ ನಡೆಸಿದ್ದಾರೆ. ಜೊತೆಗೆ ಮಗಳ ಮದುವೆ ಕಾರ್ಯ ಮುಂದುವರೆಸುವ ನಿರ್ಧಾರ ಕೈಗೊಂಡಿದ್ದಾರೆ. ಅದೇ ದಿನ ಸಂಜೆ ಸುರೇಶ್ ಮಗಳ ನಿಶ್ಚಿತಾರ್ಥ ಮಾಡಲಾಗಿದೆ. ನವೆಂಬರ್ 21ರಂದು ಮದುವೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...