alex Certify
ಕನ್ನಡ ದುನಿಯಾ       Mobile App
       

Kannada Duniya

15 ಲಕ್ಷಕ್ಕೆ ಹರಾಜಾಯ್ತು ಗಣೇಶೋತ್ಸವದ ಲಡ್ಡು

balapur-ganesh-laddu

ಹೈದ್ರಾಬಾದ್ ನ ಪ್ರಸಿದ್ಧ ಬಲಾಪುರ ಗಣೇಶೋತ್ಸವ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಲಡ್ಡು ಹರಾಜು ಪ್ರಕ್ರಿಯೆ ಇಲ್ಲಿನ ಗಣೇಶೋತ್ಸವದ ವಿಶೇಷತೆಗಳಲ್ಲೊಂದು. ಈ ಬಾರಿ 15 ಲಕ್ಷಕ್ಕೆ ಲಡ್ಡು ಹರಾಜಾಗುವ ಮೂಲಕ ದಾಖಲೆ ಬರೆದಿದೆ. ಸ್ಥಳೀಯ ವ್ಯಾಪಾರಿ ಸ್ಕೈಲ್ಯಾಬ್ ರೆಡ್ಡಿ ಈ ಲಡ್ಡನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿ ಮಾಡಿದ್ದಾರೆ.

ರೆಡ್ಡಿಯ ಜೊತೆಗೆ 24 ಮಂದಿ ಹರಾಜು ಪ್ರಕ್ರಿಯೆಯಲ್ಲಿ ಹಾಜರಿದ್ದರು. 1994 ರಲ್ಲಿ ಮೊದಲ ಬಾರಿ ಗಣೇಶನಿಗೆ ನೈವೇದ್ಯ ಮಾಡಿದ ಲಡ್ಡನ್ನು ಹರಾಜಿಗಿಡಲಾಗಿತ್ತು. ಆಗ 450 ರೂಪಾಯಿಗೆ ಲಡ್ಡು ಹರಾಜಾಗಿತ್ತು. ಬಂದ ಹಣವನ್ನು ಪಂಚಾಯತಿ ಅಭಿವೃದ್ಧಿಗೆ ಬಳಸಲಾಗುತ್ತದೆ.

ಹರಾಜು ಪ್ರಕ್ರಿಯೆಗೆ ನೂರಾರು ಭಕ್ತರು ಸಾಕ್ಷಿಯಾಗ್ತಾರೆ. ಹಿಂದಿನ ಬಾರಿಗೆ ಹೋಲಿಸಿದ್ರೆ ಈ ಬಾರಿ ಹರಾಜು ಹಣ ನಾಲ್ಕು ಲಕ್ಷ ರೂಪಾಯಿ ಹೆಚ್ಚಳವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...