alex Certify
ಕನ್ನಡ ದುನಿಯಾ       Mobile App
       

Kannada Duniya

ತಾಜ್ ನಲ್ಲಿ ಆರತಿ ಬೆಳಗಿದ ಬಜರಂಗ ದಳದ ಕಾರ್ಯಕರ್ತೆಯರು

ತಾಜ್ ಮಹಲ್ ನಲ್ಲಿ ಆರತಿ ಬೆಳಗಿ ಪೂಜೆ ನಡೆಸಿರುವ ವಿಡಿಯೋ ಒಂದು ವೈರಲ್ ಆಗಿದ್ದು, ತಾಜ್ ಮಹಲ್ ನ ಭದ್ರತಾ ತಂಡಕ್ಕೆ ಈಗ ತಲೆನೋವಾಗಿ ಪರಿಣಮಿಸಿದೆ.

ಬಜರಂಗದಳ ಮಹಿಳಾ ಘಟಕದ ಅಧ್ಯಕ್ಷೆ ಮತ್ತು ಇಬ್ಬರು ಕಾರ್ಯಕರ್ತರು ತಾಜ್ ಆವರಣದಲ್ಲಿ ಆರತಿ ನಡೆಸಿದ್ದಾರೆ. ಇದೀಗ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲನೆಗೊಳಪಡಿಸಿದೆ.

ಬಜರಂಗದಳ ಮಹಿಳಾ ಅಧ್ಯಕ್ಷೆ ಮೀನಾ ದಿವಾಕರ್ ಅವರು ಈ ಕುರಿತು ಹೇಳಿಕೆ ನೀಡಿದ್ದು, ತಾವು ಮಹಲ್ ಒಳಗೆ ಧೂಪ ಬತ್ತಿ, ಗಂಗಾಜಲದೊಂದಿಗೆ ತೆರಳಿ ಆರತಿ ಮಾಡಿದೆವು. ಈ ಮೂಲಕ ನಮ್ಮ ಶಿವ ಮಂದಿರವನ್ನು ಶುದ್ಧೀಕರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ತೇಜೋ ಮಹಾಲಯವನ್ನು ತಾಜ್ ಮಹಲ್ ಆಗಿ ಬದಲಾಯಿಸಲಾಗಿದೆ. ಅಲ್ಲಿ ನಮಾಜ್ ಮಾಡಲು ಶುಕ್ರವಾರ ಮಾತ್ರ ಅವಕಾಶವಿದೆ. ಎಲ್ಲ ದಿನ ‌ಅವಕಾಶವಿಲ್ಲ. ಹೀಗಾಗಿ ನಾವು ಆರತಿ ಮಾಡಿ ಬಂದಿದ್ದೇವೆ. ನಮ್ಮ ಮೇಲೆ ಯಾವುದೇ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧ ಎಂದು ತಿಳಿಸಿದ್ದಾರೆ.

ಮಹಲ್ ಪ್ರವೇಶದಲ್ಲಿ ಬಿಗಿ ಭದ್ರತೆ ಇದ್ದು, ಹಲವು ವಸ್ತು ಕೊಂಡೊಯ್ಯಲು ಅವಕಾಶವಿಲ್ಲ. ಅಂಥದ್ದರಲ್ಲಿ ಕಾರ್ಯಕರ್ತರು ಬೆಂಕಿ ಪಟ್ಟಣ ಕೊಂಡೊಯ್ದಿರುವುದು ಭದ್ರತಾ ಸಿಬ್ಬಂದಿಗೆ ಬಿಸಿ ತುಪ್ಪವಾಗಿದೆ.

ಕಾಂಗ್ರೆಸ್ ಆಗ್ರಾ ಘಟಕದ ಅಧ್ಯಕ್ಷೆ ಘಟನೆ ಖಂಡಿಸಿದ್ದು, ಆರತಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.‌ ಈ ಘಟನೆ ಕೋಮು ಸಾಮರಸ್ಯ ಕದಡುವ ಉದ್ದೇಶ ಎಂಬುದು ಸ್ಪಷ್ಟ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...