alex Certify
ಕನ್ನಡ ದುನಿಯಾ       Mobile App
       

Kannada Duniya

ಶುರುವಾಗಿದೆ ಗ್ರಹಣದ ಸೂತಕ: ಬಾಗಿಲು ಮುಚ್ಚಿದ ದೇವಾಲಯ

ಶತಮಾನದ ದೀರ್ಘ ಚಂದ್ರ ಗ್ರಹಣ ಇಂದು ಸಂಭವಿಸಲಿದೆ. ಚಂದ್ರ ಗ್ರಹಣದ ಸೂತಕ ಈಗಾಗಲೇ ಶುರುವಾಗಿದೆ. ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಬದರೀನಾಥ ಧಾಮದ ಬಾಗಿಲು ಮುಚ್ಚಿದೆ. ಮಧ್ಯಾಹ್ನವೇ ಸಾಯಂಕಾಲದ ಪೂಜೆ ಮಾಡಿ ಧಾಮದ ಬಾಗಿಲು ಹಾಕಲಾಗಿದೆ. ನಾಳೆ ಬೆಳಿಗ್ಗೆ ದೇವಸ್ಥಾನದ ಬಾಗಿಲು ತೆರೆಯಲಾಗುವುದು ಎಂದು ದೇವಸ್ಥಾನದ ಮೂಲಗಳು ಹೇಳಿವೆ.

ಇನ್ನು ಕೇದಾರನಾಥ ದೇವಸ್ಥಾನದ ಬಾಗಿಲನ್ನೂ ಹಾಕಲಾಗಿದೆ. ಮಧ್ಯಾಹ್ನ 2 ಗಂಟೆ 54 ನಿಮಿಷಕ್ಕೆ ಕೇದಾರನಾಥದ ಬಾಗಿಲು ಹಾಕಲಾಗಿದೆ. ಇಂದು ರಾತ್ರಿ 11 ಗಂಟೆ 54 ನಿಮಿಷಕ್ಕೆ ಚಂದ್ರ ಗ್ರಹಣ ಸಂಭವಿಸಲಿದೆ. ಆದ್ರೆ 9 ಗಂಟೆ ಮೊದಲೇ ಸೂತಕವಿರುವ ಕಾರಣ ಕೇದಾರನಾಥದ ಬಾಗಿಲು ಮುಚ್ಚಲಾಗಿದೆ.

ಶನಿವಾರ ಬೆಳಿಗ್ಗೆ ಎಂದಿನಂತೆ ಕೇದಾರನಾಥದ ಬಾಗಿಲು ತೆರೆಯಲಿದೆ. ಚಂದ್ರ ಗ್ರಹಣದ ಕಾರಣ ದೇಶದ ಅನೇಕ ದೊಡ್ಡ ದೇವಸ್ಥಾನಗಳ ಬಾಗಿಲು ಮುಚ್ಚಲಾಗಿದೆ. ಗ್ರಹಣದ ವೇಳೆ ದೇವರ ವಿಗ್ರಹವನ್ನು ಮುಟ್ಟಬಾರದು. ಈ ಕಾರಣಕ್ಕೆ ದೇವಸ್ಥಾನದ ಬಾಗಿಲು ಹಾಕಲಾಗ್ತಿದೆ. ಹರಿದ್ವಾರ, ವಾರಣಾಸಿ ಹಾಗೂ ಅಲಹಾಬಾದ್ ನಲ್ಲಿ ಸಂಜೆ ನಡೆಯಬೇಕಿದ್ದ ಗಂಗಾ ಆರತಿಯನ್ನೂ ಮಧ್ಯಾಹ್ನವೇ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...