alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಪಾಕ್ ‘ದೋಸ್ತಿ’ಗೆ ಮುಂದಾಗ್ತಾರಾ ಪ್ರಧಾನಿ ಮೋದಿ..?

Modi-Sharif-UFa-2-PTI

ಪಠಾಣ್ ಕೋಟ್ ದಾಳಿಯ ಬಳಿಕ ನೆನೆಗುದಿಗೆ ಬಿದ್ದಿದ್ದ ಭಾರತ ಮತ್ತು ಪಾಕಿಸ್ತಾನದ ನಡುವಿನ ‘ದೋಸ್ತಿ’ಗೆ ಮತ್ತೊಂದು ವೇದಿಕೆ ಸಿದ್ದವಾಗಿದ್ದು, ಇನ್ನೊಮ್ಮೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ನವಾಜ್ ಷರೀಫ್ ಉಭಯ ರಾಷ್ಟ್ರಗಳ ಸಂಬಂಧಕ್ಕೆ ‘ಬೆಸುಗೆ’ ಹಾಕುವ ಸಾಧ್ಯತೆ ಇದೆ.

ಹೌದು. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಮುಂದಿನ ತಿಂಗಳು ನ್ಯೂಯಾರ್ಕ್ ​ನಲ್ಲಿ ನಡೆಯಲಿರುವ ಪರಮಾಣು ಶೃಂಗಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದ್ದು, ಈ ಸಮಯದಲ್ಲಿ ಉಭಯ ದೇಶಗಳ ನಾಯಕರು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

2010 ರಿಂದ ಬರಾಕ್ ಒಬಾಮ ಆಯೋಜಿಸುತ್ತ ಬಂದಿರುವ ಪರಮಾಣು ಶೃಂಗದಲ್ಲಿ ಭಾರತ ಮತ್ತು ಪಾಕಿಸ್ತಾನದ ಪ್ರಧಾನಿಗಳು ಪಾಲ್ಗೊಂಡಲ್ಲಿ ಐತಿಹಾಸಿಕ ನಡೆ ಎನಿಸಲಿದ್ದು ಮಾತ್ರವಲ್ಲ, ಮಾರ್ಚ್ 31 ಮತ್ತು ಏಪ್ರಿಲ್ 1 ರಂದು ನಡೆಯಲಿರುವ ಈ ಶೃಂಗದಲ್ಲಿ ಭಾರತ ಹಾಗೂ ಪಾಕ್ ನಡುವಿನ ಬಾಂಧವ್ಯ ವೃದ್ದಿಗೆ ಉತ್ತಮ ವೇದಿಕೆಯಾಗಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...