alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ಕು ಕಾಲು, 2 ಜನನಾಂಗದ ಜೊತೆ ಜನಿಸ್ತು ಮಗು

ವಿಶ್ವದಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಗೋರಕ್ಪುರದಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಗೋರಕ್ಪುರದಲ್ಲಿ ನಾಲ್ಕು ಕಾಲಿನ ಹಾಗೂ ಎರಡು ಜನನಾಂಗದ ಮಗು ಜನಿಸಿದೆ. ಇದು ದೇವರ ಸೃಷ್ಟಿ ಎನ್ನುತ್ತಿದ್ದಾರೆ ಜನರು.

ವೇತನ ಕಾರ್ಮಿಕರಾದ ಬುಲ್ಹಾನ್ ನಿಶಾದ್ ಹಾಗೂ ರಂಭಾ ದಂಪತಿಗೆ ಈ ಮಗು ಜನಿಸಿದೆ. ಶಿಶು, ತಾಯಿ ಹೊಟ್ಟೆಯಿಂದ ಹೊರ ಬರ್ತಿದ್ದಂತೆ ವೈದ್ಯರು ಆಶ್ಚರ್ಯಕ್ಕೊಳಗಾಗಿದ್ದಾರೆ. ಅವಳಿ ಮಕ್ಕಳಿಗೆ ತಾಯಿ ಜನ್ಮ ನೀಡಬೇಕಿತ್ತು. ಆದ್ರೆ ಭ್ರೂಣದ ಬೆಳವಣಿಗೆ ಸರಿಯಾಗಿ ಆಗಲಿಲ್ಲ. ಅದ್ರ ಅಂಗ ಕೂಡ ಈ ಮಗುವಿಗೆ ಅಂಟಿಕೊಂಡಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಸೌಲಭ್ಯವಿರುವ ಆಸ್ಪತ್ರೆಗೆ ಮಗುವನ್ನು ದಾಖಲೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ಮಗುವಿನ ಅಂಗವನ್ನು ಬೇರ್ಪಡಿಸುವ ಭರವಸೆಯನ್ನು ವೈದ್ಯರು ನೀಡಿದ್ದಾರೆ. ಮಗುವಿಗೆ ನಾಲ್ಕು ಕಾಲು, ಎರಡು ಜನನಾಂಗವಿದೆ ಎಂಬ ಸಂಗತಿ ತಿಳಿಯುತ್ತಿದ್ದಂತೆ ಮಗುವನ್ನು ನೋಡಲು ಆಸ್ಪತ್ರೆ ಮುಂದೆ ಜನಸಾಗರವೇ ಸೇರಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...