alex Certify
ಕನ್ನಡ ದುನಿಯಾ       Mobile App
       

Kannada Duniya

ಜನಿಸಿದ 6 ನಿಮಿಷದಲ್ಲೇ ಸಿಕ್ತು ಆಧಾರ್

ಒಸ್ಮಾನಾಬಾದ್(ಮಹಾರಾಷ್ಟ್ರ): ಜನಿಸಿದ 6 ನಿಮಿಷದಲ್ಲೇ ಆಧಾರ್ ನಂಬರ್ ಪಡೆದುಕೊಂಡಿದೆ ಈ ನವಜಾತ ಶಿಶು. ಒಸ್ಮಾನಾಬಾದ್ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಜನಿಸಿದ 6 ನಿಮಿಷದ ಅವಧಿಯಲ್ಲಿ ಆಧಾರ್ ನಂಬರ್ ಪಡೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ರಾಧಾಕೃಷ್ಣ ಗಮೆ ತಿಳಿಸಿದ್ದಾರೆ.

ಮಗುವಿಗೆ ಭಾವನಾ ಸಂತೋಷ್ ಜಾಧವ್ ಎಂದು ನಾಮಕರಣ ಮಾಡಲಾಗಿದೆ. 12 ಗಂಟೆ 3 ನಿಮಿಷಕ್ಕೆ ಮಗು ಜನಿಸಿದ್ದು, 12 ಗಂಟೆ 9 ನಿಮಿಷಕ್ಕೆ ಆಕೆಗೆ ಜನ್ಮ ದಿನದ ದಾಖಲೆ ಮತ್ತು ಆಧಾರ್ ನಂಬರ್ ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ.

ಮಗು ಜನಿಸಿದ ಕೂಡಲೇ ಜನ್ಮ ದಿನಾಂಕವನ್ನು ಆಕೆಯ ಪೋಷಕರ ಆಧಾರ್ ನೊಂದಿಗೆ ಜೋಡಣೆ ಮಾಡಲಾಗಿದ್ದು, 6 ನಿಮಿಷದಲ್ಲೇ ಆಧಾರ್ ನಂಬರ್ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...