alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೂ ಮುನ್ನ ನಡೆದಿತ್ತು ಯಡವಟ್ಟು: ದಂಪತಿ ಮುಚ್ಚಿಟ್ಟ ಗುಟ್ಟು ಈಗ ರಟ್ಟು

ಮುಜಾಫರ್ನಗರದ ಕೊಟ್ವಾಲಿ ಕ್ಷೇತ್ರದ ಗುಲ್ಲರ್ ವಾಲಿ ಗಲ್ಲಿಯಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ಒಂದು ದಿನದ ಮಗುವನ್ನು ಮೆಟ್ಟಿಲ ಮೇಲಿಟ್ಟು ಪರಾರಿಯಾಗಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ಕಾರ್ ಟ್ರೇಸ್ ಮಾಡಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಗುವನ್ನು ಬಿಟ್ಟು ಹೋಗಲು ದಂಪತಿ ಹೇಳಿದ ಕಾರಣ ಆಶ್ಚರ್ಯ ಹುಟ್ಟಿಸುವಂತಿದೆ.

ಆರು ತಿಂಗಳ ಹಿಂದೆ ಇಬ್ಬರ ಮದುವೆಯಾಗಿತ್ತು. ಆದ್ರೆ ಒಂದು ವರ್ಷದಿಂದಲೇ ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತಂತೆ. ಪ್ರೀತಿ ಗುಂಗಿನಲ್ಲಿ ಇಬ್ಬರೂ ಒಂದಾಗಿದ್ದಾರೆ. ಮಹಿಳೆ ಗರ್ಭ ಧರಿಸಿದ್ದಾಳೆ. ಈ ವಿಷ್ಯ ತಿಳಿದ ಪ್ರೇಮಿ ಆರಂಭದಲ್ಲಿ ಮದುವೆಯಾಗಲು ನಿರಾಕರಿಸಿದ್ದನಂತೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಕಾರಣ ಮದುವೆಗೆ ಒಪ್ಪಿದ್ದನಂತೆ.

ಆರು ತಿಂಗಳ ಹಿಂದೆ ಇಬ್ಬರ ಮದುವೆಯಾಗಿತ್ತು. ಈಗ ಮಗು ಜನಿಸಿದೆ. ಮದುವೆಯಾಗಿ ಆರು ತಿಂಗಳಲ್ಲೇ ಮಗು ಹುಟ್ಟಿದೆ ಎಂಬ ಸಂಗತಿ ಸ್ಥಳೀಯರಿಗೆ ತಿಳಿದ್ರೆ ಮಾನ ಹೋಗುತ್ತೆ ಎನ್ನುವ ಕಾರಣಕ್ಕೆ ಮಗುವನ್ನು ದೂರ ಮಾಡಲು ದಂಪತಿ ಮುಂದಾಗಿದ್ದಾರೆ. ಜೂನ್ 6 ರಂದು ಕಾರಿನಲ್ಲಿ ಬಂದ ಜೋಡಿ ಮಗುವನ್ನು ಗಲ್ಲಿಯ ಮೆಟ್ಟಿಲೊಂದರ ಮೇಲಿಟ್ಟು ಪರಾರಿಯಾಗಿದ್ದಾರೆ. ಈ ಎಲ್ಲ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...