alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ಈ ಪುಟ್ಟ ಕಂದನ ದುರಂತ ಸಾವು

ಛತ್ತೀಸ್​ ಗಡ​​ದ ರಾಯ್ಪುರ್ ​​ನಲ್ಲಿ ಆ್ಯಂಬುಲೆನ್ಸ್​​ ಬಾಗಿಲು ಎರಡು ಗಂಟೆ ಕಾಲ ತೆರೆಯಲು ಬಾರದ ಕಾರಣ, ಚಿಕಿತ್ಸೆಗೆಂದು ಬಂದ 2 ತಿಂಗಳ ಮಗು ಸಾವನ್ನಪ್ಪಿದೆ.

ಮಗುವನ್ನು ಹೃದಯ ಶಸ್ತ್ರಚಿಕಿತ್ಸೆ ಮಾಡಿಸಲು ಪೋಷಕರು ಆ್ಯಂಬುಲೆನ್ಸ್​​ನಲ್ಲಿ ಕರೆದುಕೊಂಡು ಬಂದಿದ್ದರು. ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್​​ ಆಸ್ಪತ್ರೆಯನ್ನು ತಲುಪಿತು. ಇನ್ನೇನು ಮಗುವಿಗೆ ಚಿಕಿತ್ಸೆ ಆರಂಭವಾಗುತ್ತದೆ ಎಂಬ ಸಂತಸ ತಂದೆ, ತಾಯಿಯ ಮನದಲ್ಲಿತ್ತು. ಆದ್ರೆ, ಆ್ಯಂಬುಲೆನ್ಸ್​ ಬಾಗಿಲು ಸ್ಟಕ್​ ಆಯಿತು.

ಒಳಗೆ ಇದ್ದ ಪೋಷಕರು ಬಾಗಿಲು ತೆರೆಯುವಂತೆ ಕೇಳಿಕೊಂಡ್ರು. ಸಿಬ್ಬಂದಿಗಳು ಸಹ ಬಾಗಿಲು ತೆರೆಯಲು ಹರಸಾಹಸ ಪಟ್ಟರು. ಈ ವೇಳೆ ಮಗುವಿನ ತಂದೆ ಆ್ಯಂಬುಲೆನ್ಸ್​​ನ ಕಿಟಕಿಯ ಗ್ಲಾಸ್​​ ಒಡೆಯಲು ಮುಂದಾದ್ರು. ಇದನ್ನು ಗಮನಿಸಿದ ಸಿಬ್ಬಂದಿ, ಸರ್ಕಾರಿ ವಾಹನವನ್ನು ಜಖಂ ಮಾಡಬೇಡಿ ಎಂದು ತಾಕಿತು ಮಾಡಿದ್ರು. ಕೊನೆಗೆ ಆ್ಯಂಬುಲೆನ್ಸ್ ಬಾಗಿಲು ಓಪನ್​ ಆಯಿತು. ಅದಾಗಲೇ ಮಗು ಇಹಲೋಕ ತ್ಯಜಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...