alex Certify
ಕನ್ನಡ ದುನಿಯಾ       Mobile App
       

Kannada Duniya

ಬದುಕಲಿಲ್ಲ ಅತ್ಯಾಚಾರ ಸಂತ್ರಸ್ಥೆ ಜನ್ಮ ನೀಡಿದ ಮಗು

ಮುಂಬೈ: ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಜನ್ಮ ನೀಡಿದ್ದ ಗಂಡು ಮಗು ಮೃತಪಟ್ಟಿದೆ. ಅತ್ಯಾಚಾರಕ್ಕೆ ಒಳಗಾಗಿದ್ದ 13 ವರ್ಷದ ಬಾಲಕಿಗೆ 32 ವಾರಗಳ ಭ್ರೂಣವನ್ನು ಗರ್ಭಪಾತದಿಂದ ತೆಗೆಸಲು ವೈದ್ಯಕೀಯ ಕಾರಣದಿಂದ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

ಮುಂಬೈನ ಜೆ.ಜೆ. ಆಸ್ಪತ್ರೆಯಲ್ಲಿ ಬಾಲಕಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗು 1.8 ಕೆ.ಜಿ. ತೂಕವಿದ್ದು, ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಗು ಮೃತಪಟ್ಟಿದೆ. ಬಾಲಕಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.

ಮುಂಬೈನ ಬಾಲಕಿ ಮೇಲೆ ಆಕೆಯ ತಂದೆಯ ಸ್ನೇಹಿತನಾಗಿದ್ದ 23 ವರ್ಷದ ಯುವಕ ಅನೇಕ ಬಾರಿ ಅತ್ಯಾಚಾರ ಎಸಗಿದ್ದು, ಆಕೆ ಗರ್ಭಿಣಿಯಾಗಿದ್ದಳು. ಅನಾರೋಗ್ಯದ ಕಾರಣ ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದ ಸಂದರ್ಭದಲ್ಲಿ ಆಕೆಗೆ 27 ವಾರಗಳು ತುಂಬಿದ್ದವು. ಅತ್ಯಾಚಾರದ ವಿಷಯ ಗೊತ್ತಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿತ್ತು.

ಬಾಲಕಿಗೆ ವೈದ್ಯಕೀಯ ಕಾರಣಗಳಿಂದ ಗರ್ಭಪಾತ ಮಾಡಬೇಕಿತ್ತು. ವೈದ್ಯರ ವರದಿಯನ್ನಾಧರಿಸಿ ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಅನುಮತಿ ನೀಡಿದ ಬಳಿಕ, ಆಸ್ಪತ್ರೆಗೆ ದಾಖಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗು ಜನಿಸಿದ 48 ಗಂಟೆಯಲ್ಲೇ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...