alex Certify
ಕನ್ನಡ ದುನಿಯಾ       Mobile App
       

Kannada Duniya

ಅಲ್ಲಿ ಜನಿಸಿದೆ ಏಲಿಯನ್ ಆಕಾರದ ಮಗು

alian-P-160816

ಉತ್ತರ ಪ್ರದೇಶದಲ್ಲಿ ಏಲಿಯನ್ ರೂಪದ ಮಗುವೊಂದು ಜನಿಸಿದೆ. ಮಗು ಹುಟ್ಟಿ ಕೆಲವೇ ಗಂಟೆಗಳಲ್ಲಿ ಮಗುವನ್ನು ನೋಡಲು ಜನ ಸಾಗರವೇ ಹರಿದು ಬರ್ತಾ ಇದೆ. ಅಕ್ಕ-ಪಕ್ಕದ ಹಳ್ಳಿಯ ಜನರು ಶಿಶುವನ್ನು ನೋಡಲು ಆಸ್ಪತ್ರೆಗೆ ಬರ್ತಿದ್ದಾರೆ. ಈ ಶಿಶು ಮನುಷ್ಯನ ರೀತಿಯಲ್ಲಿಲ್ಲ, ಬೇರೆ ಗ್ರಹದ ಜೀವಿಗಳ ರೂಪ ತಳೆದಿದೆ ಎನ್ನುತ್ತಿದ್ದಾರೆ ವೈದ್ಯರು.

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಪದ್ರೌನ ತೆಹಸಿಲ್ ಗ್ರಾಮದ ರಂಜಿತ್ ಚೌಹಾಣ್ ಪತ್ನಿ ಶೆಲ್ ದೇವಿ, ಏಲಿಯನ್ ರೀತಿಯ ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿನ ಕಣ್ಣು, ಕಿವಿ, ಕೈ ಮತ್ತು ಮೂಗು ಬೆಳವಣಿಗೆಯಾಗಿಲ್ಲ. ಗರ್ಭಿಣಿಯಾಗಿದ್ದಾಗ ಶೆಲ್ ಗೆ ಯಾವುದೇ ಸಮಸ್ಯೆಯಾಗಿರಲಿಲ್ಲವಂತೆ. ಹೆರಿಗೆ ಕೂಡ ನಾರ್ಮಲ್ ಆಗಿದೆ. ಜೀನ್ ಸಮಸ್ಯೆಯಿಂದ ಹೀಗಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಮಗುವಿನ ಚರ್ಮದ ಮೇಲೆ ಕೆರಾಟಿನ್ ಪದರವಿದೆ. ಇದು ಡೈಮಂಡ್ ಆಕಾರದಲ್ಲಿರುವುದರಿಂದ ಮಗುವಿನ ಚರ್ಮಕ್ಕೆ ಆಮ್ಲಜನಕ ಸಿಗ್ತಾ ಇದೆ. ಹಾಗಾಗಿ ಮಗು ಇನ್ನೂ ಜೀವಂತವಾಗಿದೆ. ಇದೊಂದು ಚಮತ್ಕಾರ ಎನ್ನುತ್ತಾರೆ ವೈದ್ಯರು. ಆದ್ರೆ ಮಗು ಈ ರೀತಿ ಜನ್ಮ ತಾಳಿರುವುದು ಕುಟುಂಬಸ್ಥರ ನೋವಿಗೆ ಕಾರಣವಾಗಿದೆ. ಭಾರತದಲ್ಲಿ ಇದು ಎರಡನೇ ಮಗುವಾಗಿದೆ. ಈ ಹಿಂದೆ ನಾಗ್ಪುರದಲ್ಲಿ ಏಲಿಯನ್ ರೀತಿಯ ಮಗು ಜನಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...