alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಮಹಾತಾಯಿ

train-3

ಉತ್ತರ ಪ್ರದೇಶದ ಝಾನ್ಸಿ ರೈಲ್ವೆ ನಿಲ್ದಾಣದ ಬಳಿ ದೆಹಲಿಯಿಂದ ಜಬಲ್ಪುರಕ್ಕೆ ಹೋಗ್ತಿದ್ದ ಹಜರತ್ ನಿಜಾಮುದ್ದೀನ್-ಜಬಲ್ಪುರ್ ಎಕ್ಸ್ ಪ್ರೆಸ್ ರೈಲಿನಲ್ಲಿ ನವಜಾತ ಶಿಶು ಅಳುವ ಧ್ವನಿ ಕೇಳಿದೆ. ಗರ್ಭಿಣಿಯೊಬ್ಬಳು ರೈಲಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

ಈ ವಿಷ್ಯವನ್ನು ತಕ್ಷಣ ರೈಲ್ವೆ ಸಿಬ್ಬಂದಿಗೆ ಹೇಳಲಾಗಿದ್ದು, ಮಹಿಳೆ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗರ್ಭಿಣಿ ನೇಹಾ ತನ್ನ ಪತಿ ಜೊತೆ ಜಬಲ್ಪುರಕ್ಕೆ ಹೋಗುತ್ತಿದ್ದಳು. ಶೌಚಕ್ಕೆ ಹೋದ ಮಹಿಳೆಗೆ ಅಲ್ಲಿಯೇ ಹೆರಿಗೆ ನೋವು ಶುರುವಾಗಿದೆ. ಪತಿಗೆ ತಿಳಿಯುವ ಮೊದಲೇ ಆಕೆ ಶಿಶುವಿಗೆ ಜನ್ಮ ನೀಡಿದ್ದಾಳೆ.

ಇದಾದ ನಂತ್ರ ಪತಿಗೆ ವಿಷ್ಯ ತಿಳಿದಿದ್ದು ಆತ ಸಿಬ್ಬಂದಿಗೆ ತಿಳಿಸಿದ್ದಾನೆ. ಝಾನ್ಸಿ ತಲುಪುತ್ತಿದ್ದಂತೆ ಮಹಿಳೆ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ವೈದ್ಯರು ಮಾಹಿತಿ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...