alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪಾಗಿ ಹೇಳಿ ಬಳಿಕ ನಾಲಿಗೆ ತೊದಲಿತು ಎಂದ ಬಿಜೆಪಿ ನಾಯಕ

ರಾಜಸ್ಥಾನದ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಲಾಲ್ ಸೈನಿ ಇತಿಹಾಸವನ್ನೇ ತಪ್ಪಾಗಿ ಹೇಳಿ, ಆನಂತರ ನಾಲಗೆ ತೊದಲಿತು ಎಂಬ ನೆಪ ಹೇಳಿದ್ದು ಕೊನೆಗೆ ಅದು ಮಾಧ್ಯಮಗಳ ತಪ್ಪು ಎಂದಿರುವ ಘಟನೆ ನಡೆದಿದೆ. ಅಲ್ಲದೇ ಐತಿಹಾಸಿಕ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯೊಂದನ್ನು ನೀಡಿರುವ ಮದನ್ ಲಾಲ್ ಸೈನಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

ಮೊಘಲ್ ದೊರೆಯಾದಂತಾ ಹುಮಾಯೂನ್ ಮತ್ತು ಬಾಬರ್ ನಡುವಿನ ಸಂಭಾಷಣೆಯ ಬಗ್ಗೆ ಮದನ್ ಲಾಲ್ ಈ ಮಾಹಿತಿಯನ್ನು ನೀಡಿದ್ದರು. ತನ್ನ ಜೀವನದ ಕಡೆಯ ಕಾಲದಲ್ಲಿ ಹುಮಾಯೂನ್ ತನ್ನ ತಂದೆ ಬಾಬರ್ ಗೆ  ಭಾರತದ ಸುಲ್ತಾನನಾಗಿ ಮುಂದುವರೆಯಬೇಕಾದ್ರೆ ಕಾಗೆಗಳು, ಬ್ರಾಹ್ಮಣರು ಮತ್ತು ಮಹಿಳೆಯರನ್ನು ಗೌರವಿಸುವಂತೆ ಹೇಳಿದ್ದ ಅಂತ ಸೈನಿ ಹೇಳಿಕೆ ನೀಡಿದ್ದಾರೆ.

ಆದ್ರೆ ನಿಜ ಸಂಗತಿ ಏನಂದ್ರೆ ಬಾಬರ್ 1531ರಲ್ಲಿ ಮೃತಪಟ್ಟಿದ್ದರೆ, ಹುಮಾಯೂನ್ 1556ರಲ್ಲಿ ಕೊನೆಯುಸಿರೆಳೆದಿದ್ದ. ತಂದೆ ನಿಧನದ 25 ವರ್ಷದ ಬಳಿಕ ಮರಣ ಹೊಂದಿದ ಹುಮಾಯೂನ್, ಯಾವಾಗ ಮರಣಶಯ್ಯೆಯಲ್ಲಿದ್ದ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದು ನಾಲಿಗೆ ತಡವರಿಸಿದ್ದರಿಂದ ಆದ ಪ್ರಮಾದ ಅಂತ ಮದನ್ ಲಾಲ್ ಸ್ಪಷ್ಟೀಕರಣ ಕೊಟ್ಟಿದ್ದು, ಆನಂತರದಲ್ಲಿ ಮಾಧ್ಯಮಗಳು ನನ್ನ ಹೇಳಿಕೆಯನ್ನ ತಿರುಚಿವೆ ಅಂತ ಆರೋಪಿಸಿದ್ದಾರೆ. ಆದ್ರೆ ಟ್ರೋಲಿಗರು ಸೈನಿ ಹೇಳಿಕೆಯನ್ನಿಟ್ಟುಕೊಂಡೇ ಸಾಮಾಜಿಕ ಜಾಲತಾಣದಲ್ಲಿ ಅವರ ಕಾಲೆಳೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...