alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಮಕ್ಕಳ ಕುರಿತಾದ ಬೆಚ್ಚಿ ಬೀಳಿಸುವ ಸುದ್ದಿ

vishak

ವಿಶಾಖಪಟ್ಟಣಂ: ರಸ್ತೆ ಬದಿಯಲ್ಲಿ ಚಿಕ್ಕಮಕ್ಕಳನ್ನು ಎತ್ತಿಕೊಂಡು ಭಿಕ್ಷೆ ಬೇಡುವ ಮಹಿಳೆಯರನ್ನು ಸಾಮಾನ್ಯವಾಗಿ ನೋಡಿರುತ್ತೀರಿ. ಬಸ್ ನಿಲ್ದಾಣ, ರಸ್ತೆ, ಟ್ರಾಫಿಕ್ ಸಿಗ್ನಲ್ ಮೊದಲಾದ ಜನನಿಬಿಡ ಸ್ಥಳಗಳಲ್ಲಿ ಚಿಕ್ಕಮಕ್ಕಳನ್ನು ಎತ್ತಿಕೊಂಡು ಭಿಕ್ಷೆ ಬೇಡುವ ಕುರಿತ ಆತಂಕದ ಸ್ಟೋರಿ ಇಲ್ಲಿದೆ.

ಹೀಗೆ ಭಿಕ್ಷೆ ಬೇಡುವ ಮಹಿಳೆಯರು ಮಕ್ಕಳಿಗೆ ಹಾಲು, ತಿಂಡಿ ಕೊಡಿಸಬೇಕು ಸಹಾಯ ಮಾಡಿ ಎಂದು ಭಿಕ್ಷೆ ಕೇಳುತ್ತಾರೆ. ಅಸಲಿಗೆ ಆ ಮಹಿಳೆಯರ ಕಂಕುಳಲ್ಲಿ ಇರುವ ಕಂದಮ್ಮಗಳು ಅವರ ಮಕ್ಕಳಾಗಿರುವುದಿಲ್ಲ. ಅವು ಬಾಡಿಗೆಗೆ ತಂದಿರುವ ಮಕ್ಕಳಾಗಿರುತ್ತವೆ. ದಿನಕ್ಕೆ 200 ರೂಪಾಯಿ ಬಾಡಿಗೆ ನೀಡಿ, ಬಡ ಕುಟುಂಬದ ಮಕ್ಕಳನ್ನು ಕರೆದುಕೊಂಡು ಬಂದು, ಅವರನ್ನು ತೋರಿಸಿ ಭಿಕ್ಷೆ ಬೇಡುವ ಪರಿಪಾಠ ಬಹುತೇಕ ದೇಶದ ಎಲ್ಲಾ ಕಡೆಗಳಲ್ಲಿ ಇದೆ ಎಂದು ಹೇಳಲಾಗಿದೆ.

ವಿಶಾಖಪಟ್ಟಣಂನಲ್ಲಿ ಸ್ವಯಂಸೇವಾ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಇಂತಹ 18 ಪ್ರಕರಣ ಪತ್ತೆಯಾಗಿವೆ. ಮಕ್ಕಳನ್ನು ಬಾಡಿಗೆ ಪಡೆದು, ಅವರಿಗೆ ಕಾಯಿಲೆ ಬಂದಂತೆ ಕಾಣಲೆಂದು ಮತ್ತು ಬರುವ ಪದಾರ್ಥ ಕುಡಿಸುತ್ತಾರೆ. ಮಕ್ಕಳು ಬಾಡಿಗೆ ತಾಯಿಯ ಮಡಿಲಲ್ಲೇ ಮಂಪರಿನಲ್ಲಿ ಇರುತ್ತವೆ.

ಹೀಗೆ ದಿನಕ್ಕೆ 200 ರೂಪಾಯಿ ಬಾಡಿಗೆ ಕೊಟ್ಟು ಕರೆತಂದ ಮಕ್ಕಳನ್ನು ತೋರಿಸಿ ಭಿಕ್ಷೆ ಬೇಡುವ ಪ್ರಕರಣ ಕಳವಳಕಾರಿಯಾಗಿದೆ. ಸ್ವಯಂಸೇವಾ ಸಂಸ್ಥೆ ಈ ಬಗ್ಗೆ ಬೆಳಕು ಚೆಲ್ಲಿದ್ದು, ಚಿಕ್ಕಮಕ್ಕಳ ಪ್ರಾಣಕ್ಕೆ ಕಂಟಕವಾಗಿರುವ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಬೇಕೆಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...