alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರ ಮುಂದೆ ಡಿಸ್ಕೋ ಬಾಬಾನ ಭರ್ಜರಿ ಡ್ಯಾನ್ಸ್

Baba’s dance puts Hyderabad police, MLA in troubleವಂಚನೆ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬಂಧಿತನಾಗಿರುವ ಹೈದ್ರಾಬಾದ್ ನ ಅನ್ವರುಲ್ಲಾ ಖಾನ್ ಅಲಿಯಾಸ್ ಡಿಸ್ಕೋ ಬಾಬಾ, ಹಿರಿಯ ಪೊಲೀಸ್ ಅಧಿಕಾರಿಯ ಕಛೇರಿಯಲ್ಲೇ ಪೊಲೀಸರು ಹಾಗೂ ಶಾಸಕರ ಮುಂದೆ ಬಾಲಿವುಡ್ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಈಗ ವಿವಾದಕ್ಕೂ ಕಾರಣವಾಗಿದೆ.

ನಿಧಿ ತೋರಿಸಿಕೊಡುವ ನೆಪದಲ್ಲಿ ಉದ್ಯಮಿಯೊಬ್ಬರಿಗೆ ಡಿಸ್ಕೋಬಾಬಾ ಸುಮಾರು 35 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾನೆನ್ನಲಾಗಿದ್ದು, ಮಂಗಳವಾರದಂದು ಆತನನ್ನು ಬಂಧಿಸಲಾಗಿತ್ತು. ತಾಂತ್ರಿಕ ವಿದ್ಯೆ ಹೆಸರಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ಡಿಸ್ಕೋ ಬಾಬಾ ಸೇರಿದಂತೆ ಒಟ್ಟು 16 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಹೈದ್ರಾಬಾದಿನ ದಕ್ಷಿಣ ವಿಭಾಗದ ಡಿಸಿಪಿ, ವಿ. ಸತ್ಯನಾರಾಯಣ ಅವರ ಕಛೇರಿಯಲ್ಲಿಯೇ ಡಿಸ್ಕೋ ಬಾಬಾ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದು, ಈ ಸಂದರ್ಭದಲ್ಲಿ ಚಾರ್ಮಿನಾರ್ ಕ್ಷೇತ್ರದ ಶಾಸಕ ಅಹ್ಮದ್ ಪಾಶಾ ಖಾದ್ರಿಯವರೂ ಹಾಜರಿದ್ದರೆನ್ನಲಾಗಿದೆ.

ಡಿಸ್ಕೋ ಬಾಬಾನ ಡ್ಯಾನ್ಸ್ ವಿಡಿಯೋ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಇದಕ್ಕೆ ಸ್ಪಷ್ಟನೆ ನೀಡಿರುವ ಡಿಸಿಪಿ, ಪತ್ರಿಕಾಗೋಷ್ಟಿ ನಡೆಸಿದ ವೇಳೆ ಕೆಲ ಪತ್ರಕರ್ತರು ಆತನಿಗೆ ಡಿಸ್ಕೋ ಬಾಬಾ ಎಂಬ ಹೆಸರು ಹೇಗೆ ಬಂತೆಂದು ಪ್ರಶ್ನಿಸಿದರು. ಆಗ ಆತ, ತಾನೊಬ್ಬ ಡಿಸ್ಕೋ ಡ್ಯಾನ್ಸರ್ ಎಂದು ಹೇಳಿದ್ದು, ಅದನ್ನು ನಿರೂಪಿಸಲು ಡ್ಯಾನ್ಸ್ ಮಾಡಿದ್ದಾನೆ ಹೊರತು ಪೊಲೀಸರು ಬಲವಂತದಿಂದ ಆತನಿಗೆ ಡ್ಯಾನ್ಸ್ ಮಾಡಲು ಹೇಳಿಲ್ಲ ಎಂದಿದ್ದಾರೆ. ತಮ್ಮ ಉಪಸ್ಥಿತಿಯ ಕುರಿತು ಸ್ಪಷ್ಟನೆ ನೀಡಿರುವ ಶಾಸಕ ಅಹ್ಮದ್ ಪಾಶಾ ಖಾದ್ರಿ, ಹಲವಾರು ಮಂದಿ ಸಾರ್ವಜನಿಕರು ಡಿಸ್ಕೋ ಬಾಬಾನಿಂದ ವಂಚನೆಗೊಳಗಾಗಿದ್ದು, ಈ ಕುರಿತು ಮಾಹಿತಿ ನೀಡಲು ಡಿಸಿಪಿ ಕಛೇರಿಗೆ ತೆರಳಿದ್ದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...