alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನ ಮಂತ್ರಿ ಕಾರ್ಯಕ್ಕೆ ರಾಮ್ದೇವ್ ಶ್ಲಾಘನೆ

ramdev_iweovne

ಯೋಗಗುರು ಬಾಬಾ ರಾಮ್ದೇವ್ ಸೋಮವಾರ ಬೆಳಿಗ್ಗೆ ಭೋಪಾಲ್ ಗೆ ತೆರಳಿದ್ದಾರೆ. ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ರಾಮ್ದೇವ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ರು. ನಂತ್ರ ಮಾತನಾಡಿದ ಬಾಬಾ ರಾಮ್ದೇವ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.

ದೇಶದಲ್ಲಿ ವಿದೇಶಿ ಕಂಪನಿಗಳು  ಮಾರುಕಟ್ಟೆಯನ್ನು ಕಬಳಿಸಿವೆ. ಯಾವುದೇ ರಾಜಕೀಯ ಪಕ್ಷಗಳು ಈ ಬಗ್ಗೆ ಒಂದು ಮಾತನಾಡ್ತಿಲ್ಲ. ಸ್ವದೇಶಿ ಕಂಪನಿಗಳಿಗೆ ಪ್ರೋತ್ಸಾಹ ನೀಡ್ತಾ ಇಲ್ಲ. ವಿದೇಶಿ ಕಂಪನಿಗಳಿಂದ ಚಂದಾ ಪಡೆಯುವ ರಾಜಕೀಯ ಪಕ್ಷಗಳು ಸ್ವದೇಶಿ ಕಂಪನಿಗಳ ಬೆಳವಣಿಗೆಯನ್ನು ಸಹಿಸುವುದಿಲ್ಲ ಎಂದಿದ್ದಾರೆ.

ನೋಟು ನಿಷೇಧದ ಬಗ್ಗೆಯೂ ಮಾತನಾಡಿದ ಅವರು, ಎರಡು ಸಾವಿರ ನೋಟು ನನಗೆ ಇಷ್ಟವಾಗಲಿಲ್ಲ. ಇಷ್ಟು ದೊಡ್ಡ ಕರೆನ್ಸಿ ದೇಶದ ಆರ್ಥಿಕತೆಗೆ ಅಪಶಕುನ. ಹಾಗಾಗಿ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕೆಂದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಲ್ಲಿಯವರೆಗೆ ಏನನ್ನು ಹೇಳಿದ್ದಾರೋ ಅದನ್ನು ಮಾಡಿತೋರಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆಂದು ಪಿಎಂ ಕಾರ್ಯವನ್ನು ರಾಮ್ದೇವ್ ಶ್ಲಾಘಿಸಿದ್ದಾರೆ.

ಕಾಂಗ್ರೆಸ್ ದೇಶಹಿತದ ಕೆಲಸ ಮಾಡಿದ್ರೆ ಅದನ್ನೂ ಬೆಂಬಲಿಸುತ್ತೇನೆ ಎನ್ನುವ ಮೂಲಕ ತಾವು ಪಕ್ಷಾತೀತರು ಎಂಬುದನ್ನು ರಾಮ್ದೇವ್ ಸ್ಪಷ್ಟಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...