alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದ್ದ ಬಾಬಾ ರಾಮದೇವ್ ಫೋಟೋ ಹಿಂದಿನ ಸತ್ಯ ಏನು ಗೊತ್ತಾ..?

sofia_hayat

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಒಂದು ಫೋಟೋ ವೈರಲ್ ಆಗಿದೆ. ಬಾಬಾ ರಾಮದೇವ್ ಹಾಗೂ ಸೋಫಿಯಾ ಹಯಾತ್ ಒಟ್ಟಿಗಿರುವ ಫೋಟೋ ಅದಾಗಿದೆ. ಆದ್ರೆ ವಾಸ್ತವವಾಗಿ ಸೋಫಿಯಾ ಜೊತೆಗಿರುವುದು ಬಾಬಾ ರಾಮದೇವ್ ಅಲ್ಲ. ಬದಲಾಗಿ ರಾಮದೇವ್ ತದ್ರೂಪಿ. ಈ ಫೋಟೋವನ್ನು ಕಾಮಿಡಿ ಚಿತ್ರವೊಂದರ ಶೂಟಿಂಗ್ ವೇಳೆ ತೆಗೆಯಲಾಗಿದೆ. ಇದ್ರಲ್ಲಿ ಸೋಫಿಯಾ ರಾಮದೇವ್ ತದ್ರೂಪಿ ಜೊತೆ ಫೋಟೋ ತೆಗೆಸಿಕೊಂಡಿದ್ದಾಳೆ.

ಬಾಬಾ ರಾಮದೇವ್ ತದ್ರೂಪಿ ಹೆಸರು ಸಂಜಯ್ ತಲ್ವಾರ್. ದೆಹಲಿಯಲ್ಲಿ ಡಿಟಿಸಿಯ ಬಸ್ ಚಾಲಕನಾಗಿ ಕೆಲಸ ಮಾಡಿದ್ದರು. ದೆಹಲಿಯಲ್ಲಿ ವಾಸಿಸುವ ಸಂಜಯ್ ಹಲವಾರು ಜಾಹೀರಾತು ಹಾಗೂ ಕಾಮಿಡಿ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ರಾಮದೇವ್ ತದ್ರೂಪಿಯಾಗಿ ಬದಲಾಗಿರುವ ಹಿಂದೆ ಒಂದು ಕಥೆ ಇದೆ.

ಶೂಟಿಂಗ್ ಗೆಂದು ಚಾನೆಲ್ ನ ಕೆಲ ಸಿಬ್ಬಂದಿ ನೆಹರೂ ವಿಹಾರ್ ಗೆ ಬಂದಿದ್ದರಂತೆ. ಅಲ್ಲಿ ಸಂಜಯ್ ನೋಡಿದ ಒಬ್ಬರು, ನೀವು ರಾಮದೇವ್ ಹೋಲುತ್ತೀರಾ ಎಂದಿದ್ದಾರೆ. ಇದನ್ನು ಕೇಳಿದ ಸಂಜಯ್ ನಂತ್ರ ತಮ್ಮ ರೂಪವನ್ನು ಬದಲಾಯಿಸಿಕೊಳ್ಳುವ ಪ್ರಯತ್ನ ನಡೆಸಿದ್ರಂತೆ.

ರಾಮದೇವ್ ಹೋಲುವ ರೂಪ ಹೊಂದಿರುವುದು ಒಂದು ಅದೃಷ್ಟ ಎನ್ನುತ್ತಾರೆ ಸಂಜಯ್. ಪಂಜಾಬ್ ನಲ್ಲಿ ಮಾತನಾಡುವ ಅವರಿಗೆ ಹಿಂದಿ ಕೂಡ ಬರುತ್ತದೆ. ಕಣ್ಣಿನ ಸಮಸ್ಯೆಯಿಂದಾಗಿ ಚಾಲಕನ ಕೆಲಸ ಬಿಟ್ಟಿರುವ ಸಂಜಯ್, ಬಾಬಾ ರಾಮದೇವ್ ಧ್ವನಿಯಂತೆ ತಮ್ಮ ಧ್ವನಿ ಬದಲಾಯಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದಾರಂತೆ. 2008ರಲ್ಲಿ ರಾಮದೇವ್ ಅವರನ್ನು ಸಂಜಯ್ ಭೇಟಿಯಾಗಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...