alex Certify
ಕನ್ನಡ ದುನಿಯಾ       Mobile App
       

Kannada Duniya

ಬಹುರಾಷ್ಟ್ರೀಯ ಕಂಪನಿಗಳನ್ನೂ ಹಿಂದಿಕ್ಕಿದ ‘ಪತಂಜಲಿ’

ramad

ಯೋಗಗುರು ಬಾಬಾ ರಾಮ್ ದೇವ್, ದೇಶೀಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ, ಮುಂದಿನ ಕೆಲವೇ ದಿನಗಳಲ್ಲಿ ದೇಶದಲ್ಲಿ ‘ಪತಂಜಲಿ’ ಉತ್ಪನ್ನಗಳಿಗೆ ಬೇಡಿಕೆ ಬರಲಿದೆ ಎಂದು ಹೇಳಿದ್ದರು. ಇದೀಗ ದಿನೇ, ದಿನೇ ವಹಿವಾಟು ಹೆಚ್ಚಾಗಿದೆ ಎನ್ನಲಾಗಿದೆ.

ಪತಂಜಲಿ ಪ್ರಾಡೆಕ್ಟ್ ಗಳ ಮಾತು ಆಗಿರಲಿ, ಜಾಹೀರಾತುಗಳಲ್ಲಿಯೇ ಬಹುರಾಷ್ಟ್ರೀಯ ಕಂಪನಿಗಳನ್ನು ಪತಂಜಲಿ ಹಿಂದಿಕ್ಕಿದೆ. ಬಹುರಾಷ್ಟ್ರೀಯ ಕಂಪನಿಗಳ ಜಾಹೀರಾತಿಗಿಂತ ಪತಂಜಲಿ ಜಾಹೀರಾತುಗಳು ಅತಿ ಹೆಚ್ಚು ಬಾರಿ ಪ್ರಸಾರವಾಗುತ್ತಿವೆ. ಬ್ರಾಡ್ ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಗೊತ್ತಾಗಿದೆ. ದೇಶದ 450 ವಾಹಿನಿಗಳನ್ನು ಜನವರಿ 23 ರಿಂದ 29 ರವರೆಗೆ ಸಮೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಪತಂಜಲಿ ಜಾಹೀರಾತು ಅತಿ ಹೆಚ್ಚು ಬಾರಿ ಪ್ರಸಾರವಾಗಿದೆ.

ಸಮೀಕ್ಷೆಯ ಅವಧಿಯಲ್ಲಿ ಪತಂಜಲಿ ಜಾಹೀರಾತುಗಳು 17,000 ಬಾರಿ, ಕ್ಯಾಡ್ ಬರಿ 16,000 ಬಾರಿ, ಪಾರ್ಲೆ 15,573 ಬಾರಿ, ಹಾರ್ಲಿಕ್ಸ್ 15,495 ಬಾರಿ ಹಾಗೂ ಪಾಂಡ್ಸ್ 13,495 ಸಲ ಪ್ರಸಾರವಾಗಿವೆ. ಈ ಮೂಲಕ ಪತಂಜಲಿ ಉತ್ಪನ್ನಗಳು ಜಾಹೀರಾತಿನಲ್ಲಿ ಮಿಂಚುತ್ತಿವೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...