alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಬಾ ರಾಮ್ ದೇವ್ ಗೆ ಸೆಡ್ಡು ಹೊಡೆದ ಬಾಬಾ ಗುರ್ಮಿತ್

gurmith

ನೂಡಲ್ಸ್ ಸೇರಿದಂತೆ ಹಲವು ಬಗೆಯ ಆಹಾರ ಮತ್ತಿತರ ಉತ್ಪನ್ನಗಳನ್ನು ಬಿಡುಗಡೆ ಮಾಡಿ ದೇಶೀಯ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಹೊರಟಿರುವ ಯೋಗಗುರು ಬಾಬಾ ರಾಮ್ ದೇವ್ ಅವರ ರೀತಿಯಲ್ಲೇ ಮತ್ತೊಬ್ಬರು ಆಹಾರೋತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ.

ಹರಿಯಾಣದ ಶೀರ್ಷಾದಲ್ಲಿ ಡೇರಾ ಸಚ್ಛಾ ಸೌದಾ ಪ್ರಮುಖರಾಗಿರುವ ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ಅವರು ತಮ್ಮದೇ ಆದ ಕಂಪನಿಯೊಂದನ್ನು ಸ್ಥಾಪಿಸಿ ದೇಶೀಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಡೇರಾ ಸಚ್ಛಾ ಸೌದಾ ಮುಖ್ಯಸ್ಥರಾಗಿರುವ ಮಸ್ತಾನ್ ಜೀ, ಸತ್ನಾಮ್ ಜೀ, ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ಹೆಸರಿನಲ್ಲಿ ಎಂ ಎಸ್ ಜಿ ಸುಮಾರು 151 ಬಗೆಯ ವಿವಿಧ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ದೇಶದ ವಿವಿಧೆಡೆಯಲ್ಲಿ ಸಂಸ್ಥೆಯ ಮಳಿಗೆಗಳನ್ನು ತೆರೆಯಲಾಗುವುದು.

ಜನರಿಗೆ ಆರೋಗ್ಯಯುತ ಜೀವನ ಒದಗಿಸುವ ಉದ್ದೇಶದಿಂದ ಡೇರಾ ಸಚ್ಛಾ ವತಿಯಿಂದ ಸಾವಯವ ಆಹಾರೋತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು, ಅಕ್ಕಿ, ಟೀ ಪುಡಿ, ದೇಸಿ ತುಪ್ಪ, ಸಂಬಾರ ಪದಾರ್ಥ, ಜೇನುತುಪ್ಪ, ಮಿನರಲ್ ವಾಟರ್ ಮೊದಲಾದವು ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂದು ಹೇಳಲಾಗಿದೆ. ಇವುಗಳು ಬಾಬಾ ರಾಮ್ ದೇವ್ ಉತ್ಪನ್ನಗಳಿಗೆ ಪೈಪೋಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...