alex Certify
ಕನ್ನಡ ದುನಿಯಾ       Mobile App
       

Kannada Duniya

10ನೇ ತರಗತಿ ಫೇಲ್ ಆದವನ ಆತ್ಮಹತ್ಯೆಗೆ ಕಾರಣವಾದ್ಲು ಬಿಎ ಪಾಸ್ ಪತ್ನಿ

ಡೆಹ್ರಾಡೂನ್ ನ ಸಹಸ್ಪುರ್ ನಿವಾಸಿ ಪುನಿತ್ ಸಾವಿಗೆ ಸಂಬಂಧಿಸಿದಂತೆ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಪತಿ ಪುನೀತ್ ಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದಳು ಎನ್ನಲಾಗಿದೆ.

ಮಾರ್ಚ್ 6ರಂದು ಪುನೀತ್ ಸಾವನ್ನಪ್ಪಿದ್ದ. ನೇಣು ಬಿಗಿದ ಸ್ಥಿತಿಯಲ್ಲಿ ಪುನೀತ್ ಶವ ಸಿಕ್ಕಿತ್ತು. ಬಿಜ್ನೋರ್ ನಿವಾಸಿಯಾಗಿದ್ದ ಪುನೀತ್ ಸಾಹಸ್ಪುರ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಮಾರ್ಚ್ 14 ರಂದು ಪುನೀತ್ ತಂದೆ ಸೊಸೆ ಸ್ವಾತಿ ವಿರುದ್ಧ ದೂರು ನೀಡಿದ್ದರು. ಮಗನ ಆತ್ಮಹತ್ಯೆಗೆ ಸೊಸೆ ಕಾರಣವೆಂದು ಆರೋಪ ಮಾಡಿದ್ದರು.

ಪುನೀತ್ 10ನೇ ತರಗತಿ ಫೇಲ್ ಆಗಿದ್ದ. ಸ್ವಾತಿ ಬಿ.ಎ ಪಾಸ್ ಆಗಿದ್ದಳು. ಇದೇ ವಿಚಾರಕ್ಕೆ ಸ್ವಾತಿ ಆಗಾಗ ಪುನೀತ್ ನನ್ನು ದೂಷಿಸುತ್ತಿದ್ದಳು. ಎಲ್ಲರೆದುರು ಪುನೀತ್ ಮಾನ ತೆಗೆಯುತ್ತಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವಂತೆಯೂ ಒತ್ತಡ ಹೇರುತ್ತಿದ್ದಳು ಎಂದು ತಂದೆ ದೂರಿದ್ದಾರೆ. ಸ್ವಾತಿ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡ ಪೊಲೀಸರು ಮಾರ್ಚ್ 15ರಂದು ಸ್ವಾತಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...