alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿಗೂ ‘ಆಪರೇಷನ್’ ಭಯ…! ರೆಸಾರ್ಟ್ ಸೇರಿದ ಶಾಸಕರು

ನವದೆಹಲಿ: ಸಂಕ್ರಾಂತಿ ವೇಳೆಗೆ ರಾಜಕೀಯ ಕ್ರಾಂತಿ ನಡೆಯಲಿದೆ ಎನ್ನಲಾಗಿದ್ದು, ಇದಕ್ಕೆ ಪೂರಕವಾದ ಬೆಳವಣಿಗೆಗಳು ತೆರೆಮರೆಯಲ್ಲಿ ನಡೆದಿವೆ.

ಆಪರೇಷನ್ ಕಮಲಕ್ಕೆ ಪ್ರತಿಯಾಗಿ ರಾಜ್ಯ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕೂಡ, ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಈ ‘ಆಪರೇಷನ್’ ಭಯದಿಂದ ಬಿಜೆಪಿ ನಾಯಕರು, ಪಕ್ಷದ ಶಾಸಕರನ್ನೆಲ್ಲ ಒಂದೇ ಕಡೆ ಕೂಡಿ ಹಾಕಿದ್ದಾರೆ. ಸಂಸತ್ ಚುನಾವಣೆ ತಯಾರಿ ನೆಪದಲ್ಲಿ ದೆಹಲಿಗೆ ಎಲ್ಲಾ ಶಾಸಕರನ್ನು ಕರೆಸಿಕೊಂಡ ಪಕ್ಷದ ನಾಯಕರು, ಸಭೆ ಮೇಲೆ ಸಭೆ ನಡೆಸಿ, ಶಾಸಕರನ್ನು ಉಳಿಸಿಕೊಂಡಿದ್ದಾರೆ.

ಆದರೆ, ಸಂಸತ್ ಚುನಾವಣೆ ತಯಾರಿಗಿಂತ ಹೆಚ್ಚಾಗಿ ಬಿಜೆಪಿ ನಾಯಕರಿಗೆ ತಮ್ಮ ಪಕ್ಷದ ಶಾಸಕರು ಪಕ್ಷ ಬಿಟ್ಟು ಹೋದ್ರೆ ಎಂಬ ಚಿಂತೆಯೇ ಕಾಡುತ್ತಿದೆ. ‘ಆಪರೇಷನ್’ ಭಯದಿಂದಾಗಿ ದೆಹಲಿಯಲ್ಲಿದ್ದ ಶಾಸಕರನ್ನು ಗುರುಗ್ರಾಮಕ್ಕೆ ಕಳುಹಿಸಲಾಗಿದೆ.

ಗುರುಗ್ರಾಮದ ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್ ಗೆ 2 ತಂಡಗಳಲ್ಲಿ ಶಾಸಕರು ತೆರಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಹೊರಟಿರುವ 3 ನೇ ತಂಡ ಶಾಪಿಂಗ್ ಮುಗಿಸಿ ಗುರುಗ್ರಾಮಕ್ಕೆ ತೆರಳಲಿದೆ ಎಂದು ಹೇಳಲಾಗಿದೆ.

ಇನ್ನು ಇದೇ ವಿಚಾರವಾಗಿ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದಾರೆ. ನಮ್ಮ ಶಾಸಕರಿಗೆ ಆಮಿಷವೊಡ್ಡಿ ಸೆಳೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...