alex Certify
ಕನ್ನಡ ದುನಿಯಾ       Mobile App
       

Kannada Duniya

ಆಯುಷ್ಮಾನ್ ಭಾರತ್ ಯೋಜನೆ: ಜನರನ್ನು ಕಾಡ್ತಿದೆ ಈ ಸಮಸ್ಯೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಶುರು ಮಾಡಿದ್ದಾರೆ. ಈ ಯೋಜನೆಯ ಲಾಭವನ್ನು 29 ರಾಜ್ಯಗಳ 445 ಜಿಲ್ಲೆಯ ಜನರು ಪಡೆಯಲಿದ್ದಾರೆ. 10 ಕೋಟಿ ಕುಟುಂಬಗಳ 50 ಕೋಟಿಗೂ ಹೆಚ್ಚು ಜನರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.

ಈ ಯೋಜನೆ ಶುರುವಾದ ಮೇಲೆ ಜನರು ಉಚಿತ ವೈದ್ಯಕೀಯ ಸೌಲಭ್ಯ ಪಡೆಯಲು ತಾವು ಅರ್ಹರಾ ಎಂಬುದನ್ನು ಪರೀಕ್ಷಿಸುತ್ತಿದ್ದಾರೆ. ಪಟ್ಟಿಯಲ್ಲಿ ತಮ್ಮ ಹೆಸರಿದ್ಯಾ ಎಂಬುದನ್ನು ನೋಡಲು ಮುಂದಾಗಿದ್ದಾರೆ. ಆದ್ರೆ ಜನರಿಗೆ ಎರಡು ಸಮಸ್ಯೆ ಎದುರಾಗಿದೆ.

ಮೊದಲನೇಯದಾಗಿ ಆಯುಷ್ಮಾನ್ ಭಾರತ ವೆಬ್ಸೈಟ್ https://mera.pmjay.gov.in ತುಂಬಾ ನಿಧಾನ. ಇನ್ನೊಂದು ಈ ವೆಬ್ಸೈಟ್ ನಲ್ಲಿ ಎಲ್ಲ ಮಾಹಿತಿ ಇಂಗ್ಲೀಷ್ ನಲ್ಲಿದೆ. ಈ ಎರಡು ಸಮಸ್ಯೆಯಿಂದ ಜನರಿಗೆ ಸರಿಯಾದ ಮಾಹಿತಿ ಸಿಗ್ತಿಲ್ಲ. ದೆಹಲಿ, ಕೇರಳ, ಒಡಿಶಾ, ಪಂಜಾಬ್ ಮತ್ತು ತೆಲಂಗಾಣ ರಾಜ್ಯಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...