alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ನಲ್ಲಿ ಹಾಕಿದ್ದ ಫೋಟೋ ತಂದೊಡ್ಡಿದೆ ಸಂಕಷ್ಟ

ayudha-puja-with-swords-guns-goes-controversialಆಯುಧ ಪೂಜೆಯಂದು ವಾಹನಗಳು ಹಾಗೂ ಮನೆಯಲ್ಲಿರುವ ಆಯುಧಗಳನ್ನು ದೇವರ ಮುಂದಿಟ್ಟು ಪೂಜಿಸುವುದು ವಾಡಿಕೆ. ಹೀಗೆ ಆಯುಧ ಪೂಜೆ ಮಾಡಿದವರೊಬ್ಬರು ಅದರ ಫೋಟೋವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಈಗ ಸಂಕಷ್ಟಕ್ಕೆ ಕಾರಣವಾಗಿದೆ.

ತಮಿಳುನಾಡಿನ ಹಿಂದೂ ಮಕ್ಕಳ್ ಕಚ್ಚಿ ರಾಜ್ಯಾಧ್ಯಕ್ಷ ಅರ್ಜುನ್ ಸಂಪತ್ ತಮ್ಮ ಮನೆಯಲ್ಲಿ ಆಯುಧ ಪೂಜೆ ನೆರವೇರಿಸುವ ವೇಳೆ ಕತ್ತಿಗಳು, ಗನ್ ಇಟ್ಟು ಪೂಜೆ ನೆರವೇರಿಸಿದ್ದರು. ಇದರ ಫೋಟೋವನ್ನು ಫೇಸ್ ಬುಕ್ ಗೆ ಹಾಕಿದ ಬಳಿಕ ವಿವಾದ ಉಂಟಾಗಿದೆ.

ಅರ್ಜುನ್ ಸಂಪತ್, ಕತ್ತಿಗಳು ಹಾಗೂ ಗನ್ ಹೊಂದಿರುವುದಕ್ಕೆ ಆಕ್ಷೇಪಿಸಿರುವ ಮನಿತನೇಯ ಮಕ್ಕಳ್ ಕಚ್ಚಿ ಮುಖಂಡ ಜವಾಹ್ರಿಲ್, ಅರ್ಜುನ್ ಸಂಪತ್, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಲು ಆಯುಧಗಳನ್ನು ಸಂಗ್ರಹಿಸುತ್ತಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅರ್ಜುನ್ ಸಂಪತ್, ಕತ್ತಿಗಳು ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ತಮಗೆ ನೀಡಿದ್ದರೆ ಏರ್ ಗನ್ ತಮ್ಮ ಪುತ್ರನದ್ದು. ಆತ ಕೊಯಮತ್ತೂರಿನ ರೈಫಲ್ ಕ್ಲಬ್ ಸದಸ್ಯನೂ ಹೌದು ಎಂದಿದ್ದಾರೆ. ಎಂಎಂಕೆ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲವೆಂದು ಅರ್ಜುನ್ ಸಂಪತ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...